ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಸುದ್ದಿ ಗ್ರಾಮಸ್ವರಾಜ್ಯ ಗಾಂಧಿ ರಥಕ್ಕೆ ಸ್ವಾಗತ

Advt_Headding_Middle

 

 

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಿನಾದ್ಯಂತ ಸಂಚರಿಸುತ್ತಿರುವ ಸುದ್ದಿ ಗ್ರಾಮಸ್ವರಾಜ್ಯ ಗಾಂಧಿ ರಥಕ್ಕೆ ಬಾಳಿಲ ಗ್ರಾಮ ಪಂಚಾಯತ್ ವತಿಯಿಂದ ಸೆ.30 ರಂದು ಸ್ವಾಗತಿಸಲಾಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ,ಸದಸ್ಯ ರವೀಂದ್ರ ರೈ ಟಪ್ಪಾಲುಕಟ್ಟೆ, ಪಿ.ಡಿ.ಒ ಹೂವಪ್ಪ ಗೌಡರವರು ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ ಬಗ್ಗೆ ಮಾತನಾಡಿ ಗಾಂಧಿರಥಕ್ಕೆ ಶುಭಕೋರಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸುಶೀಲ, ಕೊಡಿಯಾಲ ಗ್ರಾ.ಪಂ.ಪಿ.ಡಿ.ಒ ಶ್ರೀಮತಿ ಚಂದ್ರಾವತಿ, ಬಾಳಿಲ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಶೀಲ ರೈ, ತಾರಾನಾಥ್, ಬಾಳಿಲ ಸುದ್ದಿ ಪತ್ರಿಕೆ ವಿತರಕ ಶರೀಫ್ ಪಂಜಿಗಾರು,ಗಂಗಾಧರ್, ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಸರಣಾ ವಿಭಾಗದ ಮುಖ್ಯಸ್ಥ ಗಣೇಶ್ ಕುಕ್ಕುದಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಜಾಹೀರಾತು ವಿಭಾಗದ ಮುಖ್ಯಸ್ಥ ರಮೇಶ ನೀರಬಿದಿರೆ,ವರದಿಗಾರ ಜಗತ್ ದೇರಾಜೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.