Breaking News

ಸುಳ್ಯ ಬಿಜೆಪಿ ಮಂಡಲ ಮಹಿಳಾ ಮೋರ್ಚಾದ ಕಾರ್ಯನಿರ್ವಹಣಾ ತಂಡದ ಸಭೆ

Advt_Headding_Middle

ಸುಳ್ಯ ಬಿಜೆಪಿ ಮಂಡಲ ಮಹಿಳಾ ಮೋರ್ಚಾದ ಕಾರ್ಯನಿರ್ವಹಣಾ ತಂಡದ ಸಭೆಯು ಸೆ. ೩೦ರಂದು ಸುಳ್ಯ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶುಭದಾ ಎಸ್. ರೈ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಯವರು ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿಸಬೇಕು ಪ್ರತಿ ಭೂತ್ ಗಳಲ್ಲಿ ಪೇಜ್ ಪ್ರಮುಖರ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು. ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಹತ್ತು ಹಲವು ಸೇವೆಗಳನ್ನು ಮಾಡಿರುತ್ತೀರಿ ಇನ್ನೂ ಅಕ್ಟೋಬರ್ ಏಳರವರೆಗೆ ಹೆಚ್ಚಿನ ಸೇವೆಯನ್ನು ನೀಡಿ ಮಹಿಳಾ ಮೋರ್ಚಾ ಇನ್ನಷ್ಟು ಎತ್ತರಕ್ಕೆ ಬೆಳೆಯಲು ನೀವೆಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಮಹಿಳಾ ಮೋರ್ಚಾದ ಸದಸ್ಯರು ಸಣ್ಣ ಸಣ್ಣ ಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳ ವಿರುದ್ಧ ಮಹಿಳಾ ಮೋರ್ಚಾದ ಕಡೆಯಿಂದ ಏನಾದರೂ ಒಂದು ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ತ್ರಿವೇಣಿ ಪೆರುವೋಡಿ ಸಂಘಟನಾತ್ಮಕವಾಗಿ ಮಾತನಾಡಿದರು. ಸರೋಜಿನಿ ಜಯಪ್ರಕಾಶ್ ಸ್ವಾಗತಿಸಿದರು. ಶಶಿಕಲಾ ವಂದಿಸಿದರು. ಗೀತಾ ಶೇಖರ್ ವರದಿ ಮಂಡಿಸಿದರು. ತೇಜಸ್ವಿನಿ ಕಾರ್ಯಕ್ರಮನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.