Breaking News

ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆ : ವಿನಯ್ ಕುಮಾರ್ ಕಂದಡ್ಕ

Advt_Headding_Middle

 

 

ಪಿಎಂ ಆವಾಜ್ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿದೆ ಎಂದು ಸುಳ್ಯ ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಪಿಎಂ ಅವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರದಿಂದ ನೀಡಲಾಗುವ 1.5 ಲಕ್ಷ ರೂಪಾಯಿಗಳ ಸಹಾಯಧನವು ಕೊರೋನಾ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಬಿಡುಗಡೆಗೆ ಬಾಕಿ ಯಾಗಿದ್ದು ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿತ್ತು. ಇವರಲ್ಲಿ ಕೆಲವರಿಗೆ ಜುಲೈ ತಿಂಗಳಲ್ಲಿ ಹಣ ಬಿಡುಗಡೆಯಾಗಿದ್ದು ಇನ್ನೂ ಅನೇಕರಿಗೆ ಹಣ ಬಿಡುಗಡೆಯಾಗಲು ಬಾಕಿಯಾಗಿತ್ತು.
ಈ ಕುರಿತು ನಗರ ಪಂಚಾಯತ್ ವತಿಯಿಂದ ನಾವು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ಸಚಿವರಲ್ಲಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ನಿರ್ದೇಶಕರಲ್ಲಿ ಮಾತನಾಡಿ ಈ ಕುರಿತು ಗಮನ ಸೆಳೆಯಲಾಗಿತ್ತು. ಪರಿಣಾಮವಾಗಿ ಇದೀಗ ಸುಳ್ಯ ನಗರದ ಸುಮಾರು 34 ಫಲಾನುಭವಿಗಳಿಗೆ ರೂ 27,75,000 ಬಿಡುಗಡೆಯಾಗಿದ್ದು ಒಂದೆರಡು ದಿನಗಳಲ್ಲಿ ಅವರುಗಳ ಖಾತೆಗೆ ಜಮೆಯಾಗಲಿದೆ. ಇನ್ನೂ 23 ಫಲಾನುಭವಿಗಳ ಖಾತೆಯು ಪರಿಶೀಲನೆಯಲ್ಲಿದ್ದು ಅವರಿಗೂ ಕೂಡ ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ. 2017 18ರಲ್ಲಿ ಮಂಜೂರು ಬಂದು ಸಂಪೂರ್ಣಗೊಂಡ ಮನೆಗಳಿಗೆ ತಲಾ 112500, ಹಾಗೂ ಭಾಗಶಹ ಪೂರ್ಣಗೊಂಡ ಮನೆಗಳಿಗೆ ತಲಾ 75 ಸಾವಿರ, 2019 -20 ರಲ್ಲಿ ಮಂಜೂರುಗೊಂಡು ಪೂರ್ಣ ಬಂದಿರುವ ಮನೆಗಳಿಗೆ ತಲಾ 75000, ಭಾಗಶಹ ಪೂರ್ಣಗೊಂಡ ಮನೆಗಳಿಗೆ ತಲಾ 37500 ದಂತೆ ಅವರ ಖಾತೆಗಳಿಗೆ ಹಣ ಜಮೆ ಆಗಲಿದೆ. ಫಲಾನುಭವಿಗಳು ಕೂಡಲೇ ತಮ್ಮ ಪೂರ್ಣ ಮನೆಗಳನ್ನು ಪೂರ್ತಿಗೊಳಿಸಿ ಕ್ಲಪ್ತ ಸಮಯದಲ್ಲಿ ಧನಸಹಾಯವನ್ನು ಪಡೆದುಕೊಳ್ಳುಬಹುದು ಎಂದು ಅವರು ವಿನಂತಿಸಿಕೊಂಡಿದ್ದಾರೆ. ಅಲ್ಲದೆ ಈಗಾಗಲೇ ಮಂಜೂರಾತಿ ಪಡೆದು ಮನೆ ಕಟ್ಟದಿರುವ ಫಲಾನುಭವಿಗಳು ಕೂಡಲೇ ಕಾಮಗಾರಿಯನ್ನು ಆರಂಭಿಸಿ ಭಾವಚಿತ್ರಗಳನ್ನು ಅಪ್ಲೋಡ್ ಮಾಡುಬೇಕು ಈ ಬಗ್ಗೆ ಕಚೇರಿಗೆ ಮಾಹಿತಿ ನೀಡಬೇಕಾಗಿ ಎಂದು ಅವರು ಕೇಳಿಕೊಂಡಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.