Breaking News

ನಾಳೆ ದುಗ್ಗಲಡ್ಕದಲ್ಲಿ ಗಾಂಧಿ ಜಯಂತಿ ಆಚರಣೆ

Advt_Headding_Middle

 

ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳುಕೂಟ ದುಗಲಡ್ಕ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಸುಳ್ಯ ಇವರ ಸಹಯೋಗದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಆಶಯದಂತೆ ಅ.2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುವುದು.
ಪೂರ್ವಾಹ್ನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು,ಎನ್ನೆಂಸಿಯ ವಿಶ್ರಾಂತ ಪ್ರಾಂಶುಪಾಲರಾದ ಡಾ.ಪ್ರಭಾಕರ ಶಿಶಿಲ ಗಾಂಧಿ ಉಪನ್ಯಾಸ ನೀಡಲಿದ್ದಾರೆ.ಈ ಸಂದರ್ಭದಲ್ಲಿ ಮಲೆನಾಡು ಸಿರಿ ಪ್ರಶಸ್ತಿ ಪುರಸ್ಕೃತ ದುಗಲಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎ.ಯು.ರವರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ವಿಶೇಷವಾಗಿ ಗಾಂಧಿ ನಡಿಗೆ,ವಿದ್ಯಾರ್ಥಿಗಳಿಗೆ ಗಾಂಧೀಜಿ ಚಿತ್ರ ಬಿಡಿಸುವ ಸ್ಪರ್ಧೆ, ದೇಶಭಕ್ತಿ ಗೀತೆ ,ಗಾಂಧೀಜಿ ಕುರಿತು ಭಾಷಣ ಸ್ಪರ್ಧೆ ನಡೆಯಲಿದೆ.ಸಾರ್ವಜನಿಕರಿಗೆ ಗಾಂಧೀಜಿಯ ಮೆಚ್ಚಿನ ರಘುಪತಿ ರಾಘವ ರಾಜಾರಾಂ ಭಜನಾ ಸ್ಪರ್ಧೆ ನಡೆಯಲಿದೆ.ಭಜನಾ ಸ್ಪರ್ಧೆಗೆ ನಗದು ಮತ್ತು ಫಲಕ ನೀಡಲಾಗುತ್ತದೆ.ಬಳಿಕ ಬಹುಮಾನ ವಿತರಣೆ ನಡೆಯಲಿದೆ. ಸ್ಪರ್ಧೆಗಳ ಹೆಚ್ಚಿನ ಮಾಹಿತಿಗಾಗಿ 9448464593 ಯನ್ನು ಸಂಪರ್ಕಿಸಬಹುದೆಂದು ಕಾರ್ಯಕ್ರಮ ಸಂಘಟಕರಾದ ಕುರಲ್ ತುಳುಕೂಟದ ಸಂಚಾಲಕರಾದ ಕೆ‌. ಟಿ.ವಿಶ್ವನಾಥ, ಅಧ್ಯಕ್ಷ ನಾರಾಯಣ ಟೈಲರ್, ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊಯಿಕುಳಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.