ಅಜ್ಜಾವರ ಪ್ರೌಢಶಾಲೆಯಲ್ಲಿ ಗಾಂಧಿ ನಡಿಗೆ ಮತ್ತು ಸೈಕಲ್ ಜಾಥಾ ಸ್ವಚ್ಚತಾ ಕಾರ್ಯಕ್ರಮ

Advt_Headding_Middle

ಜೆ ಸಿ ಐ ಪಯಸ್ವಿನಿ ಸುಳ್ಯ , ಸರಕಾರಿ ಪ್ರೌಢಶಾಲೆ ಅಜ್ಜಾವರ ಇವರ ಆಶ್ರಯದಲ್ಲಿ ನಡೆದ ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಯನ್ನು ಗಾಂಧಿ ನಡಿಗೆ ಮತ್ತು ಸೈಕಲ್ ಜಾಥಾ ಸ್ವಚ್ಚತಾ ಕಾರ್ಯಕ್ರಮ ಇಂದು ಅಜ್ಜಾವರ ಪ್ರೌಢಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ದೀಪ ಬೆಳಗಿಸುವುದರ ಮೂಲಕ ನಿವೃತ್ತ ಪ್ರಾಂಶುಪಾಲ ಮನಮೋಹನ ಮೂಡೂರು ಉದ್ಘಾಟಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಿಕ್ಷಕ ಅರುಣ್ ಕುಮಾರ್ ಪಡ್ಡಂಬೈಲ್ ಉಪಸ್ಥಿತರಿದ್ದು ಗಾಂಧಿ ತತ್ವ, ಗಾಂಧಿ ನಡೆದು ಬಂದ ಹಾದಿ, ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಅಜ್ಜಾವರ ಶಾಲೆಯ ಶಿಕ್ಷಕ ವೃಂದ, ಗ್ರಾ ಪಂ ಅಧ್ಯಕ್ಷರು ಸದಸ್ಯರು, ನಿವೃತ್ತ ಸೈನಿಕ ಗುರುಪ್ರಸಾದ್ ಮೇನಾಲ, ಸುಧಾಕರ ಕಾಟಿಪಳ್ಳ, ತಾ ಪಂ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಗುರುರಾಜ್ ಮೊದಲಾದವರು ಮಾತನಾಡಿದರು. ಅಜ್ಜಾವರ ಪ್ರೌಢಶಾಲಾ ವಿದ್ಯಾರ್ಥಿಗಳು, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶಾಲೆಯ ಶಾಲಾಭಿದ್ದಿ ಸಮಿತಿ,ಅದ್ಯಕ್ಷ ರು ಮತ್ತು ಸರ್ವಸದಸ್ಯರು ಹಳೆ ವಿಧ್ಯಾರ್ಥಿ ಸಂಘ,ಅದ್ಯಕ್ಷ ರು ಮತ್ತು ಸರ್ವ ಸದಸ್ಯರು ಧನಲಕ್ಷ್ಮಿ ಮಹಿಳಾ ಮಂಡಳಾ ಅಜ್ಜಾವರದ ಅಧ್ಯಕ್ಷರು ಮತ್ತು ಸದಸ್ಯರು, ಅಜ್ಜಾವರ ಓಂ ಫ್ರೆಂಡ್ಸ್‌ನ ನಾಗರಿಕರು ಕಾಲು ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.