Breaking News

ಯುವಜನ ಸಂಯುಕ್ತ ಮಂಡಳಿ – ಯುವಜನ ಸೇವಾ ಸಂಸ್ಥೆಯಿಂದ ಗಾಂಧಿ ಜಯಂತಿ

Advt_Headding_Middle

 

ಎಸ್. ಎಂ. ಬಾಪು ಸಾಹೇಬರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ

 

ಸುಳ್ಯದ ಯುವಜನ ಸಂಯುಕ್ತ ಮಂಡಳಿ – ಯುವಜನ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಗಾಂಧಿ ಜಯಂತಿ ಆಚರಣೆ ಹಾಗೂ ಎಸ್.ಎಂ. ಬಾಪು ಸಾಹೇಬರಿಗೆ 2021 ನೇ ಸಾಲಿನ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.

ಗಾಂಧಿ ನಡಿಗೆ : ಸಭಾ ಕಾರ್ಯಕ್ರಮ ಆರಂಭಕ್ಕೂ ಮೊದಲು ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಗಾಂಧಿ ನಡಿಗೆ ಆರಂಭಗೊಂಡಿತು.‌ ಗಾಂಧಿ ಆಶಯದ ಘೋಷಣೆಗಳೊಂದಿಗೆ ಯುವಜನ ಸಂಯುಕ್ತ ಮಂಡಳಿ ಪದಾಧಿಕಾರಿಗಳು ಸುಳ್ಯದ ಮುಖ್ಯ ರಸ್ತೆಯಲ್ಲಿ ಹೆಜ್ಜೆ ಹಾಕಿದರು. ಸುಳ್ಯ ಜೇಸಿಐ ಪಯಸ್ವಿನಿ ಸಂಸ್ಥೆಯವರು ಅಜ್ಜಾವರದ ಅಡ್ಪಂಗಾಯದಿಂದ ಗಾಂಧಿ ಬೈಸಿಕಲ್‌ ರ್ಯಾಲಿ ಇದೇ ವೇಳೆಗೆ ಸುಳ್ಯ ತಲುಪಿ, ಸುಳ್ಯದಲ್ಲಿ ನಡೆಯುತ್ತಿದ್ದ ಗಾಂಧಿ ನಡಿಗೆಯೊಂದಿಗೆ ಸೇರಿಕೊಂಡು ಯುವಜನ ಸಂಯುಕ್ತ ಮಂಡಳಿ ಸಭಾಂಗಣ ತಲುಪಿತು. ಅಲ್ಲಿ ಗಾಂಧಿ ನಡಿಗೆ ಹಾಗೂ ಬೈಸಿಕಲ್ ರ್ಯಾಲಿ ಸಮಾಪನಗೊಂಡಿತು.

ಮೀರಾ ಭಜನ್ : ಬಳಿಕ ಗಾಯಕಿ ಶ್ರೀಮತಿ ರಮ್ಯ ದಿಲೀಪ್ ಬಾಬ್ಲುಬೆಟ್ಟುರವರಿಂದ ಮೀರಾ ಭಜನೆ ಪ್ರಸ್ತುತಿ ನಡೆಯಿತು. ಆರ್ಯ ಬಾಬ್ಲುಬೆಟ್ಟು ತಬಲದಲ್ಲಿ ಸಹಕಾರ ನೀಡಿದರು.

ಪ್ರಶಸ್ತಿ ಪ್ರದಾನ : ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಮಾಜಿಕ ಧುರೀಣ ಎಸ್.ಎಂ. ಬಾಪು ಸಾಹೇಬರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ ನಡೆಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆ ಗಳ ಸ್ಥಾಪಕ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಸ್ಥಾಪಕಾಧ್ಯಕ್ಷರಾದ ಸವಣೂರು ಸೀತಾರಾಮ ರೈ ಪ್ರಶಸ್ತಿ ಪ್ರದಾನಗೈದರು.
ಯುವಜನ ಸೇವಾ ಸಂಸ್ಥೆ ಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ.ಸುಂದರ ಕೇನಾಜೆ ಮುಖ್ಯ ಭಾಷಣ ಮಾಡಿದರು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಗುರುರಾಜ್ ಅಜ್ಜಾವರ ಮುಖ್ಯ ಅತಿಥಿಗಳಾಗಿದ್ದರು.

ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಜನ ಸಂಯುಕ್ತ ಮಂಡಳಿಯ ಗೌರವ ಸಲಹೆಗಾರ ದಿನೇಶ್ ಮಡಪ್ಪಾಡಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಯುವಜನ ಸೇವಾ ಸಂಸ್ಥೆ ಕಾರ್ಯದರ್ಶಿ ಆರ್.ಕೆ. ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.