Breaking News

ಮಡಪ್ಪಾಡಿ ಗ್ರಾಮದಲ್ಲಿ ಗಾಂಧಿ ಜಯಂತಿ ಆಚರಣೆ-ಗಾಂಧಿ ನಡಿಗೆ

Advt_Headding_Middle

 

ಮಹತ್ಮಾಗಾಂಧಿ ಸೇವಾ ತಂಡಕ್ಕೆ ಗೌರವಾರ್ಪಣೆ

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಈ ಪ್ರಯುಕ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಿಂದ ಪಂಚಾಯತ್ ವರೆಗೆ ಗಾಂಧಿ ನಡಿಗೆ ನಡೆಯಿತು. ಗಾಂಧಿ ನಡಿಗೆಯನ್ನು ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಯ್ಯ ಪೂಂಬಾಡಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಪಂಚಾಯತ್ ನಲ್ಲಿ ನಡೆದ ಸಭಾ ಕಾರ್ಯಕ್ರಮ ದಲ್ಲಿ ಗ್ರಾ.ಪಂ. ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಯವರು ಅಧ್ಯಕ್ಷ ತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದಲ್ಲಿ ಕಳೆದ 7 ವರ್ಷಗಳಿಂದ ದುಡಿಯುತ್ತಿರುವ ಮಹಾತ್ಮಗಾಂಧಿ ಸೇವಾ ತಂಡದ ಸದಸ್ಯರನ್ನು ಶಾಲು ಹಾಕಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುಜಾತ ಹಾಡಿಕಲ್ಲು, ಜಯರಾಮ ಹಾಡಿಕಲ್ಲು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂಧಿ ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು.
ಕೀರ್ತನ್ ಕೊಡಪಾಲ, ಸುನಿಲ್ ಮಡಪ್ಪಾಡಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.