ಪಂಜ: ವಿವಿಧ ಇಲಾಖೆಗಳ ಸಾರ್ವಜನಿಕ ಬೇಡಿಕೆ ಈಡೇರಿಸುವಂತೆ ಗಾಂಧಿ ಉಪವಾಸ ಸತ್ಯಾಗ್ರಹ

Advt_Headding_Middle

 


ವಿವಿಧ ಇಲಾಖೆಗಳ ಸಾರ್ವಜನಿಕ ಬೇಡಿಕೆಯನ್ನು ಈಡೇರಿಸುವಂತೆ ಒಂದು ದಿನ ಗಾಂಧಿ ಉಪವಾಸ ಸತ್ಯಾಗ್ರಹ ಅ.2.ರಂದು ಮಹಾತ್ಮ ಗಾಂಧಿ ವಿದ್ಯಾಪೀಠ ಪಂಜ ಇದರ ವತಿಯಿಂದ ಜರುಗಿತು. ಪಂಜ ಮುಖ್ಯ ರಸ್ತೆ ಬದಿ ಗ್ರಾಮ ವಿಧಾನಸೌಧ ಎದುರುಗಡೆ.
ಮುಂಜಾನೆ 8.30 ರಿಂದ ಉಪವಾಸ ಸತ್ಯಾಗ್ರಹ ಪಂಜ ಎದುರುಗಡೆ ಆರಂಭಗೊಂಡಿದೆ. ಪಂಜ ಅಂಚೆ ಕಚೇರಿಗೆ ಸ್ವಂತ ಕಟ್ಟಡದ ವ್ಯವಸ್ಥೆ, ಪಂದ್ಯದಲ್ಲಿ ಬಿಎಸ್ ಎನ್ ಎಲ್ ನೆಟ್ ವರ್ಕ್ ಸಮರ್ಪಕ ಗೊಳಿಸುವುದು. ಕಾಂಞಂಗಾಡ್ ಕಾಣಿಯೂರು ರೈಲು ಮಾರ್ಗ ನಿರ್ಮಾಣ ಕಾಮಗಾರಿ ಅನುಷ್ಠಾನಗೊಳಿಸುವುದು.ಪಂಜದಲ್ಲಿ ೧೧೦ ಕೆವಿ ವಿತರಣ ಕೇಂದ್ರ ಶ್ರೀಘ್ರ ಅನುಷ್ಠಾನಗೊಳಿಸುವುದು. ಪಂಜ ವಲಯ ಅರಣ್ಯದ ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕ ತರಬೇತಿ ಕೇಂದ್ರ,ಬಂಟಮಲೆ ತಪ್ಪಲು ಹಾಗೂ ಕುಮಾರಧಾರ ಪುಳಿಕುಕ್ಕು ನಾಕೂರು ಗಯ ಪ್ರವಾಸಿ ತಾಣ ಕೇಂದ್ರ ಮಾಡಲು ಸರಕಾರದ ಗಮನಕ್ಕೆ ತರುವುದು, ಪಂಜದಲ್ಲಿ ಪಶುವೈದ್ಯ ಕೇಂದ್ರವನ್ನು ಬಲಗೊಳಿಸುವುದು, ಪಂಜ ರೈತ ಸಂಪರ್ಕ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆಯನ್ನು ಜಂಟಿಯಾಗಿ ತೆರೆಯುವುದು, ಖಾಯಂ ಸಿಬ್ಬಂದಿ ನೇಮಕ ಮಾಡಿ ಕಾರ್ಯನಿರ್ವಹಿಸುವುದು. ಪಂಜ ಮದ್ಯ ಮುಕ್ತ ಗ್ರಾಮ ಆಗಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ.ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸುವಂತೆ ಆಯಾ ಇಲಾಖೆಯ ಕಚೇರಿಯ ಮುಂದೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದು ಮುಖ್ಯಸ್ಥ ಪುರುಷೋತ್ತಮ ಮುಡೂರು ವಿವರಿಸಿದರು.
ಜಿನ್ನಪ್ಪ ಗೌಡ ಅಳ್ಪೆ ಕೋಟ್ಯಡ್ಕ ಮೊದಲಾದವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.