ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಸ್ವಚ್ಚರಥಕ್ಕೆ ಚಾಲನೆ

Advt_Headding_Middle

 

ವರ್ಷಪೂರ್ತಿ ಸ್ವಚ್ಚತೆ ಮಾಡಿ ಸುಬ್ರಹ್ಮಣ್ಯ ಸದಾ ಸ್ವಚ್ಚವಾಗಿರಲು ಸಂಕಲ್ಪ

ಗಾಂಧಿ ನಡಿಗೆ, ಘೋಷಣೆಯೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಡಿಗೆ

ಸಂಘ ಸಂಸ್ಥೆಗಳ ಸಹಕಾರದಲ್ಲಿ ಶ್ರಮದಾನ ಮೂಲಕ ಸುಬ್ರಹ್ಮಣ್ಯ ಸ್ವಚ್ಚ

ಅಜಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮದ ಅಂಗವಾಗಿ
ಅ. ೨ರಂದು ಗಾಂಧಿ ಜಯಂತಿಯಂದು ಕುಕ್ಕೆ ಸುಬ್ರಹ್ಮಣ್ಯ ಪೇಟೆ ಪರಿಸರದಲ್ಲಿ
“ಬೃಹತ್ ಸ್ವಚ್ಛತಾ ಹೀ ಸೇವಾ ಶ್ರಮದಾನ” ಕಾರ್ಯಕ್ರಮ, ಸ್ವಚ್ಚತಾ ರಥ ಕ್ಕೆ ಚಾಲನೆ, ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಕಡಬ ತಾಲೂಕು ಸೋಕ್ ಪಿಟ್ ಅಭಿಯಾನ ಮತ್ತು ಸುಬ್ರಹ್ಮಣ್ಯ ಗ್ರಾ.ಪಂ ಸೋಕ್ ಪಿಟ್ ಅಭಿಯಾನಕ್ಕೆ ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ಚಾಲನೆ ನೀಡಿದರು. ಬಳಿಕ
ಸುಬ್ರಹ್ಮಣ್ಯ ಗ್ರಾ.ಪಂ ಬಳಿ ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ಸ್ವಚ್ಚತಾ ರಥಕ್ಕೆ ಚಾಲನೆ ನೀಡಿದರು. ಆ ಬಳಿಕ ಗ್ರಾ.ಪಂ ನಿಂದ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗಾಂಧಿ ನಡಿಗೆ ಮೂಲಕ ಹೋಗಲಾಯಿತು. ಈ ಸಂದರ್ಭ ಘೋಷಣೆ ಕೂಗಲಾಯಿತು. ದೇವಸ್ಥಾನ ಬಳಿ ಸ್ವಚ್ಚತಾ ಕಾರ್ಯಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಬಾವುಟ ಬೀಸಿ ಚಾಲನೆ ನೀಡಿದರು. ಆ ಬಳಿಕ ವಿವಿಧ ತಂಡಗಳ ಮೂಲಕ ಸುಬ್ರಹ್ಮಣ್ಯ ಪೇಟೆಯಾದ್ಯಂತ ಸ್ವಚ್ಚಗೊಳಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕಡಬ ತಾಲ್ಲೂಕು ಪಂಚಾಯತ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಅಧಿಕಾರಿ ಸಿಬ್ಬಂದಿ ವರ್ಗ, ಸಂಪುಟ ನರಸಿಂಹ ಮಠ, ವಿದ್ಯಾಸಂಸ್ಥೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳಾದ, ರೋಟರಿ ಸುಬ್ರಹ್ಮಣ್ಯ, ಜೆಸಿಐ ಸುಬ್ರಹ್ಮಣ್ಯ, ಇನ್ನರ್‌ವೀಲ್ ಸುಬ್ರಹ್ಮಣ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯುವ ಬ್ರಿಗೇಡ್, ಸಂಜೀವಿನಿ ಸ್ವ-ಸಹಾಯ ಸಂಘ, ಕೇಸರಿ ಬಳಗ, ಪರ್ವತಮುಖಿ ಫ್ರೆಂಡ್ಸ್, ವರ್ತಕರ ಸಂಘ, ಸಹಕಾರಿ ಸಂಘಗಳು, ಪತ್ರಕರ್ತರ ಸಂಘ, ಅಟೋ ಚಾಲಕ-ಮಾಲಕರ ಸಂಘ, ಒಡಿಯೂರು ಸ್ವಸಹಾಯ ಸಂಘ, ಕುಲ್ಕುಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ಗಣೇಶೋತ್ಸವ ಸಮಿತಿ, ಅಯ್ಯಪ್ಪ ದೀಪೋತ್ಸವ ಸಮಿತಿ ಸುಬ್ರಹ್ಮಣ್ಯ, ರೈತ ಯುವಕ ಮಂಡಲ ಏನೆಕಲ್ಲು, ನಿಸರ್ಗ ಯುವಕ ಮಂಡಲ ಐನೆಕಿದು, ಶಾಲಾಭಿವೃದ್ಧಿ ಸಮಿತಿಗಳು, ಸುದ್ದಿ ಸಮೂಹ ಸಂಸ್ಥೆ ಇವುಗಳ ಜಂಟಿ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.