ಬೊಳ್ಳಾಜೆ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Advt_Headding_Middle

 

ಗಾಂಧಿ ನಡಿಗೆ ಶಾಲೆಯ ಕಡೆಗೆ, ಪುಸ್ತಕ ವಿತರಣೆ, ಮಕ್ಕಳಿಗೆ ಸ್ಪರ್ಧೆ ಆಯೋಜನೆ

ಶ್ರೀ ಶಾರದಾ ವಿದ್ಯಾವರ್ಧಕ ಸಂಘ, ಶಾಲಾ ಶೈಕ್ಷಣಿಕ ಸಮನ್ವಯ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳಾಜೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಗಾಂಧಿ ನಡಿಗೆ ಶಾಲೆಯ ಕಡೆಗೆ, ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ ವು ಇಂದು ನಡೆಯಿತು.
ಕೊರತ್ತೋಡಿ ಬಸ್ ಸ್ಟ್ಯಾಂಡ್ ಬಳಿಯಿಂದ ಆರಂಭಗೊಂಡ ಶಾಲೆಯ ಕಡೆಗೆ ಗಾಂಧಿ ನಡಿಗೆಗೆ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿಯವರು ಚಾಲನೆ ನೀಡಿದರು.
ಬಳಿಕ ಬೆಟ್ಟ ಮಾರ್ಗವಾಗಿ ಬೊಳ್ಳಾಜೆಗೆ ನಡೆಗೆ ಜರಗಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷ ತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ರತ್ನಾಕರ ಮಾಪಲಕಜೆಯವರು ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಪುಸ್ತಕ ದಾನಿಗಳಾದ ಸೀಫುಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಇಬ್ರಾಹಿಂ ಸೀಫುಡ್ ರವರು ಆಗಮಿಸಿ ಪುಸ್ತಕ ವಿತರಿಸಿದರು.
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಧನಂಜಯ ಕುಮಾರ್ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಶಾಲಾ ಶೈಕ್ಷಣಿಕ ಸಮನ್ವಯ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಿಲಾರ್ ಕಜೆ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ರಾಜರಾಂ ಭಟ್ ಬೆಟ್ಟ, ನಿವೃತ್ತ ಶಿಕ್ಷಕಿ ಶ್ಯಾಮಲಾ ಎ.ವಿ., ವಿಪತ್ತು ನಿರ್ವಹಣಾ ಘಟಕದ ಸಂಚಾಲಕ ವೆಂಕಟೇಶ್ವರ ಡಿ.ಜೆ., ಸುಳ್ಯ ಜರ್ನಲಿಸ್ಟ್ ಯೂನಿಯನ್ ಮಾಜಿ ಅಧ್ಯಕ್ಷ ಶರೀಫ್ ಜಟ್ಟಿಪಳ್ಳರವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸೀತಾರಾಮರವರು ಸ್ವಾಗತಿಸಿ, ಶಿಕ್ಷಕಿ ಸುಮಿತ್ರಾ ವಂದಿಸಿದರು. ವೀರಾಂಜನೆ ಸ್ಪೋಟ್ಸ್ ೯ ಕ್ಲಬ್ ನ ಸದಸ್ಯರು ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಧ.ಗ್ರಾ.ಯೋ.ಬೊಳ್ಳಾಜೆ ಒಕ್ಕೂಟದ ಅಧ್ಯಕ್ಷ ರಮೇಶ್ ನಾಯ್ಕ ಹೈದಂಗೂರು ಹಾಗೂ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಬೊಳ್ಳಾಜೆ ಘಟ ಸಮಿತಿ ಅಧ್ಯಕ್ಷ ಗಣೇಶ್ ಬೊಳ್ಳಾಜೆ ಬಹುಮಾನದ ಪ್ರಯೋಕರಾಗಿದ್ದರು. ಮುದ್ದು ಕೃಷ್ಣ ರಿಕ್ಷಾ ಚಾಲಕ ಮಾಲಕ ಕೃಷ್ಣ ಕೊರತ್ತೋಡಿ ವಾಹನದ ವ್ಯವಸ್ಥೆ ಮಾಡಿದ್ದರು. ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ,
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಕಿಲಾರ್ಕಜೆ, ಸುಬ್ರಹ್ಮಣ್ಯ ಬೊಳ್ಳಾಜೆ, ಅಂಚೆ ಪಾಲಕ ಕೇಶವ ಬಾಳೆಗುಂಡಿ, ಶಿಕ್ಷಕಿ ಸುಚಿತ್ರಾ ಬೊಳ್ಳಾಜೆ, ಚಾಮುಂಡೇಶ್ವರಿ ಭಜನಾ ಸಂಘದ ಅಧ್ಯಕ್ಷ ಅಚ್ಚುತ ಮುಂಡೋಕಜೆ, ಗ್ರಾ.ಪಂ. ಸದಸ್ಯ ವೇಣುಗೋಪಾಲ ತುಂಬೆತ್ತಡ್ಕ ಹಾಗೂ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ದುಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಗಳು ಸಹಕರಿಸಿದರು.
ಶೈಕ್ಷಣಿಕ ಸಮನ್ವಯ ಸಮಿತಿ ಸದಸ್ಯ ದಯಾನಂದ‌ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.