ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ಗಾಂಧಿಜಯಂತಿ ಆಚರಣೆ ಮತ್ತು ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸ್ವಚ್ಚತಾ ಕಾರ್ಯ

Advt_Headding_Middle

 

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಗಾಂಧಿಜಯಂತಿ ಆಚರಣೆಯನ್ನು ಅ. 2 ರಂದು ವಿಭಿನ್ನವಾಗಿ ಆಚರಿಸಲಾಯಿತು.
ಕ್ಲಬ್
ಅಧ್ಯಕ್ಷ ಲ| ಆನಂದ ಪೂಜಾರಿ ಹಾಗೂ ಪದಾಧಿಕಾರಿಗಳು , ಹಿರಿಯ ಸದಸ್ಯರುಗಳು ಹಾಗೂ ಆನಂದ ಎಲೆಕ್ಟ್ರಿಕಲ್ಸ್ ನ ನೌಕರರು ಮತ್ತು ಸಾರ್ವಜನಿಕರು ಲಯನ್ಸ್ ಕ್ಲಬ್ ಆವರಣದಲ್ಲಿ ಸೇರಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಹಿರಿಯ ಲಯನ್ಸ್ ಸದಸ್ಯ ಲ| ಪ್ರೊ. ಬಾಲಚಂದ್ರ ಗೌಡರು ಗಾಂಧೀಜಿಯವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಪ್ರತಿಜ್ಞೆಯನ್ನು ಭೋಧಿಸಿದರು. ಲ| ಆನಂದ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಲ| ರಮಿತಾ ಜಯರಾಮ್ ವಂದಿಸಿದರು. ಎಲ್ಲಾ ಲಯನ್ಸ್ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಬಳಿಕ ಎಲ್ಲರೂ ಘೋಷಣೆಯೊಂದಿಗೆ ಗಾಂಧಿ ನಡಿಗೆಯ ಮೂಲಕ ಸುಳ್ಯದ ಸರಕಾರಿ ಆಸ್ಪತ್ರೆಗೆ ತೆರಳಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ವೈದ್ಯರಾದ ಡಾ.ಕರುಣಾಕರ ಗೌಡ ರವರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.
ಈ ಸಂದರ್ಭ ಶ್ರೀಮತಿ ಲೀಲಾ ದಾಮೋದರ ರವರು ರಚಿಸಿದ “ಗೆಲುವಾಗಲೆ ಮನ ” ಎಂಬ ಲಲಿತ ಪ್ರಬಂಧಗಳ 37 ಪುಸ್ತಕಗಳನ್ನು ವಿತರಿಸಲಾಯಿತು. ಬಳಿಕ
ಲಯನ್ಸ್ ಅಧ್ಯಕ್ಷರು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.
ಲಯನ್ಸ್ ಕ್ಲಬ್ಬಿನ ಸದಸ್ಯರು ಹಾಗೂ ಆನಂದ್ ಎಲೆಕ್ಟ್ರಿಕಲ್ಸ್ ನೌಕರರು ಸೇರಿ ಆಸ್ಪತ್ರೆಯ ಆವರಣ ಹಾಗೂ ವಿದ್ಯುತ್ ಪರಿವರ್ತಕ ಕೇಂದ್ರದಲ್ಲಿ ಹಾಗೂ ಕಟ್ಟಡ ಮೇಲೆ ತುಂಬಿರುವ ಗಿಡ ಗಂಟಿಗಳನ್ನು ಮೆಷಿನ್ ಬಳಸಿ ಸ್ವಚ್ಛಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.