Breaking News

ಕೊಡಿಯಾಲಬೈಲಿನಲ್ಲಿ ಗಾಂಧಿ ನಡಿಗೆ – ಪ್ರತಿಜ್ಞೆ ಸ್ವೀಕಾರ

Advt_Headding_Middle

 

ಸುಳ್ಯದ ಗಾಂಧಿ ಚಿಂತನ ವೇದಿಕೆ, ಕೊಡಿಯಾಲಬೈಲಿನ ವಿಷ್ಣು ಯುವಕ ಮಂಡಲ, ವರಲಕ್ಷ್ಮಿ ಮಹಿಳಾ ಮಂಡಲ, ನಾಗರಿಕ ಹೋರಾಟ ಸಮಿತಿ, ಮಹಮ್ಮಾಯಿ ಸೇವಾ ಸಮಿತಿ, ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ, ಕಿರಿಯ ಪ್ರಾಥಮಿಕ ಶಾಲಾ ಎಸ್ ಡಿಎಂಸಿ ಮತ್ತು ಎಂಜಿಎಂ ಶಾಲಾ ಸಹಯೋಗದೊಂದಿಗೆ ಕೊಡಿಯಾಲಬೈಲಿನಲ್ಲಿ ಇಂದು ಗಾಂಧಿ ನಡಿಗೆ ಮತ್ತು ಗಾಂಧಿ ವನದಲ್ಲಿ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಕೊಡಿಯಾಲಬೈಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತಿರುಗುವಲ್ಲಿ ಸಮಾವೇಶಗೊಂಡ ಈ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಗಾಂಧಿ ನಡಿಗೆ ಆರಂಭಿಸಿದರು. ಹಿರಿಯರಾದ ನಿವೃತ್ತ ಶಿಕ್ಷಕ ಸೋಮಯ್ಯ ಗೌಡರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶುಭ ಹಾರೈಸಿದರು.
ಬಳಿಕ ಹೊರಟ ಗಾಂಧಿ ನಡಿಗೆಯು ಕೊಡಿಯಾಲಬೈಲು ಕಾಲನಿ, ವಿಷ್ಣುಮೂರ್ತಿ ದೈವಸ್ಥಾನ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೌಡ ಸಮುದಾಯ ಭವನ ಮತ್ತು ಮಹಾತ್ಮಾಗಾಂಧಿ ಮಲ್ನಾಡ್ ಪ್ರೌಢಶಾಲಾ ಮೈದಾನದ ಮೂಲಕ ಗಾಂಧಿವನಕ್ಕೆ ಬಂದಿತು.
ಗಾಂಧಿ ನಡಿಗೆಯುದ್ದಕ್ಕೂ ಸುದ್ದಿಯ ಆಶಯದಂತೆ ಜನಾಶಯದ ಘೋಷಣೆಗಳನ್ನು ಕೂಗಲಾಯಿತು.
ಅಲ್ಲಿ ಶ್ರೀ ವಿಷ್ಣು ಯುವಕ ಮಂಡಲದ ಅಧ್ಯಕ್ಷ ಮಧುಕಿರಣ್, ವರಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ, ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಕಾರ್ಯದರ್ಶಿ ಸುರೇಶ್ ಎಂ ಎಚ್, ಕೊಡಿಯಾಲಬೈಲು ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಜಗದೀಶ್, ಕೊಡಿಯಾಲಬೈಲು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಟೀಚರ್, ಕೊಡಿಯಾಲಬೈಲು ಅಂಗನವಾಡಿ ಟೀಚರ್ ಸುಶೀಲಾ, ಎಂ.ಜಿ.ಎಂ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚಿದಾನಂದ ಕೇನಾಜೆ ಕಾರ್ಯಕ್ರಮದ ಕುರಿತು ಮಾತನಾಡಿದರು.
ಬಳಿಕ ಸುದ್ದಿಬಿಡುಗಡೆಯ ಪ್ರಧಾನ ವರದಿಗಾರ ಹಾಗೂ ಸುಳ್ಯದ ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಪ್ರತಿಜ್ಞಾವಿಧಿ ಬೋಧಿಸಿದರು. ಸೇರಿದ ಎಲ್ಲಾ ನಾಗರಿಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮಾಧವ ಕುದ್ಪಾಜೆಯವರು ಸಿಹಿತಿಂಡಿ ಪ್ರಾಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರುಗಳಾದ ಮಮತಾ ಕುಕ್ಕಾಜೆ ಹಾಗೂ ಹರೀಶ್ ಉಬರಡ್ಕ ಸ್ಥಳೀಯ ಪ್ರಮುಖರುಗಳಾದ ಎಸ್ಡಿಎಂಸಿ ಉಪಾಧ್ಯಕ್ಷ ರಾಜೇಶ್,’ ಎಂಜಿಎಂ ಶಾಲೆಯ ಮಾಜಿ ಸಂಚಾಲಕರಾದ ಪಿ.ಎಸ್ .ಗಂಗಾಧರ್, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಪ್ರಭಾಕರ ಅಮೈ, ಭಾರತಿ ಬಂಟ್ವಾಳ್, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.