Breaking News

ಹೇಮಳ : ಅರಣ್ಯ ಸಮಿತಿ ವಾರ್ಷಿಕ ಮಹಾಸಭೆ, ಸ್ವಚ್ಚತಾ ಕಾರ್ಯಕ್ರಮ, ಸನ್ಮಾನ, ಸಹಾಯಧನ ಹಸ್ತಾಂತರ

Advt_Headding_Middle

ಹೇಮಳ ಗ್ರಾಮ ಅರಣ್ಯ ಸಮಿತಿ ವತಿಯಿಂದ 20-21 ನೇ ಸಾಲಿನ ವಾರ್ಷಿಕ ಮಹಾಸಭೆ, ಗಾಂಧಿ ಜಯಂತಿ ಪ್ರಯುಕ್ತ ದೇವಸ್ಥಾನ, ಶಾಲೆಯ ಪರಿಸರ 1ಕಿಲೋ ಮೀಟರ್ ರಸ್ತೆ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಮುಕ್ತಪಡಿಸಿ ಸ್ವಚ್ಛತೆ ಆಂದೋಲನ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯರಾಮ ಐಪಳ ಅಧ್ಯಕ್ಷತೆ ವಹಿಸಿದ್ದರು. ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ್ ಎನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವನ್ಯಜೀವಿ ಪರಿಪಾಲಕರಾದ ಭುವನೇಶ್ ಕೈಕಂಬ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ನೂತನ ಕಾರ್ಯದರ್ಶಿ ಅರಣ್ಯ ರಕ್ಷಕರನ್ನು ಬರಮಾಡಿಕೊಳ್ಳಲಾಯಿತು. ನಿರ್ಗಮನ ಅರಣ್ಯ ಗ್ರಾಮ ಸಮಿತಿ  ಕಾರ್ಯದರ್ಶಿ ಸಂತೋಷ್ ಕೆ. ಯವರನ್ನು ಸನ್ಮಾನಿಸಿ ಬೀಳ್ಕೊಡುಗೆ ಮಾಡಲಾಯಿತು. ಹಿಂದಿನ ವನಪಾಲಕ ದೇವಿಪ್ರಸಾದ್ ಕೆಯ್ಯೂರು ರವರನ್ನು ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಅನಾರೋಗ್ಯ ಬರ ಪೀಡಿತ ಶ್ರೀಮತಿ ರತ್ನಾವತಿ ಅವರಿಗೆ 25 ಸಾವಿರ ಧನಸಹಾಯವನ್ನು ಅವರ ಪುತ್ರ ಸುಜಿತ್ ಅವರಿಗೆ ಹಸ್ತಾಂತರಿಸಲಾಯಿತು. ಸ್ವಚ್ಚತಾ ಕಾರ್ಯಕ್ರಮ ಬಳಿಕ ಹಣ್ಣು ಹಂಪಲು ಗಿಡಗಳನ್ನು ಅರಣ್ಯ ವಲಯಾಧಿಕಾರಿ ಮಂಜುನಾಥ್ ಎನ್ ಮತ್ತು ಸಮಿತಿ ಸದಸ್ಯರು ನೆಡುವ ಕಾರ್ಯಕ್ರಮ ಮಾಡಿದರು. ಈ ಸಂದರ್ಭದಲ್ಲಿ ಕೆಮ್ಮಾಲೆ ದೇವಳದ ಆಡಳಿತ ಸಮಿತಿ ಸದಸ್ಯರಲ್ಲದೆ,ಸ್ಥಳಿಯರು, ಅರಣ್ಯ ಸಮಿತಿ ಸದಸ್ಯರಾದ ನಾರಾಯಣ ಕೋಜೆ, ಜನಾರ್ದನ ಹೇಮಳ, ವೇದಾವತಿ ಹೇಮಳ, ಅಶೋಕ್ ಹೇಮಳ,ದಿನೇಶ್ ಹೇಮಳ, ಹೊನ್ನಪ್ಪ ಐಪಳ, ಜಯಾನಂದ ಕೆ ಹೇಮಳ, ಗೋಪಾಲಕೃಷ್ಣ ಐಪಳ, ಪ್ರಕಾಶ್ಚಂದ್ರ ಹೇಮಳ , ಹರ್ಷಿತ್ ಹೇಮಳ , ಮುಕೇಖ ಹೇಮಳ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪ್ರವೀಣ್‌ಕುಮಾರ್ ಹೇಮಳ ಸ್ವಾಗತಿಸಿದರು, ಹರ್ಷಿತ್ ಹೇಮಳ ಕಾರ್ಯಕ್ರಮ ನಿರೂಪಿಸಿದರು, ಜನಾರ್ದನ ಮಾಸ್ಟರ್ ವಂದಿಸಿದರು.

ವರದಿ : ಸಂಕಪ್ಪ ಸಾಲಿಯತ್ ಅಲೆಕ್ಕಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.