Breaking News

ಅರಂತೋಡು : ಗಾಂಧಿ ನಡಿಗೆ

Advt_Headding_Middle

 

 

ಫಿಟ್ ಇಂಡಿಯಾ ಅಭಿಯಾನ, ವಿಶೇಷ ಗ್ರಾಮ ಸಭೆ

ಅರಂತೋಡು ಗ್ರಾಮ ಪಂಚಾಯತ್ ಮತ್ತು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜ್ ಅರಂತೋಡು ಇದರ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯೋಗದಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮತ್ತು ಮಹಾತ್ಮಾಗಾಂಧಿ ಜಯಂತಿಯ ಅಂಗವಾಗಿ “ಸತ್ಯಾಗ್ರಹ ಸೇ ಸ್ವಚ್ಛಾಗ್ರಹ” ಮತ್ತು ” ಸ್ವಚ್ಛತಾ ಹೀ ಸೇವಾ” ಮತ್ತು “ಫಿಟ್ ಇಂಡಿಯಾ ಅಭಿಯಾನ” ಮತ್ತು ಗಾಂಧಿ ನಡಿಗೆ” ಡಿಜಿಟಲ್ ಗ್ರಂಥಾಲಯ ಉದ್ಘಾಟನೆ, ಸೋಕ್ ಪಿಟ್ ಅಭಿಯಾನ, ಜಲ ಜೀವನ್ ಮಿಷನ್ ಕಾರ್ಯಕ್ರಮಗಳನ್ನು ಒಳಗೊಂಡಂತೆ ವಿಶೇಷ ಗ್ರಾಮ ಸಭೆ ನಡೆಯಿತು. ಫಿಟ್ ಇಂಡಿಯಾ ಅಭಿಯಾನ ಮತ್ತು ಗಾಂಧಿ ನಡಿಗೆ ಕಾರ್ಯಕ್ರಮಕ್ಕೆ ಕಾಲೇಜಿನ ಕ್ರೀಡಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹರಿಣಿ ಮತ್ತು ಪ್ರಾಂಶುಪಾಲರಾದ  ರಮೇಶ್ ಎಸ್ ಗಿಡಗಳಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆದು, ತೆಕ್ಕಿಲ್ ಸಭಾ ಭವನ ದಲ್ಲಿ ಕೊನೆಗೊಂಡಿತು. ಡಿಜಿಟಲ್ ಗ್ರಂಥಾಲಯ, ಸೋಕ್ ಪಿಟ್ , ಜಲಜೀವನ್ ಮಿಷನ್ ಕಾರ್ಯಕ್ರಮಗಳು ಉದ್ಘಾಟನೆಗೊಂಡಿತು. ಅನಂತರ ವಿಶೇಷ ಗ್ರಾಮ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಹರಿಣಿ ವಹಿಸಿದ್ದರು. ಪ್ರಾಂಶುಪಾಲರಾದ ರಮೇಶ್ ಎಸ್ ದೀಪ ಬೆಳಗಿಸಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ  ಶಿವಾನಂದ ಕುಕ್ಕುಂಬಳ ಸ್ವಚ್ಛ ಗ್ರಾಮ ನಿರ್ಮಾಣದಲ್ಲಿ ಜನರ ಸಹಭಾಗಿತ್ವದ ಕುರಿತು ಮಾತನಾಡಿದರು. ಜಲಜೀವನ್ ಮಿಷನ್ ಕುರಿತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್  ಸುಂದರ್ ಮತ್ತು ಕುಮಾರಿ ನಮಿತಾ ಸೋಕ್ ಪಿಟ್ ಅಭಿಯಾನ ಕುರಿತು ಮಾಹಿತಿ ನೀಡಿದರು. ಅನೇಕ ಸಂಘ ಸಂಸ್ಥೆಗಳಿಗೆ ಕಸ ಸಂಗ್ರಹ ತೊಟ್ಟಿಗಳನ್ನು ಪಂಚಾಯತ್ ವತಿಯಿಂದ ನೀಡಲಾಯಿತು. ಗ್ರಾಮ ಪಂಚಾಯಿತ್ ಉಪಾಧ್ಯಕ್ಷರಾದ ಕುಮಾರಿ ಶ್ವೇತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಾ ಮೇದಪ್ಪ,  ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ  ಕಿಶೋರ್ ಕುಮಾರ್ ,  ಮಣಿಕಂಠನ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಜಯಪ್ರಕಾಶ್ ಎಂ ಆರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಎನ್ಎಸ್ಎಸ್ ಸ್ವಯಂಸೇವಕರು ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ  ಕೇಶವ್ ಅಡ್ತಲೆ ವಂದಿಸಿದರು. ಎನ್ಎಸ್ಎಸ್
ಕಾರ್ಯಕ್ರಮಾಧಿಕಾರಿ
ಮೋಹನ್ ಚಂದ್ರ ಕಾರ್ಯಕ್ರಮ
ನಿರ್ವಹಿಸಿದರು. ಗ್ರಾಮ ಪಂಚಾಯತ್ ಸದಸ್ಯರುಗಳು, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷರಾದ  ಟಿಎಂ ಶಹೀದ್ , ನಿವೃತ್ತ ಶಿಕ್ಷಕರಾದ  ಜತ್ತಪ್ಪ ಮಾಸ್ತರ್ , ಊರಿನ ಗಣ್ಯರು, ಉಪನ್ಯಾಸಕರು, ಪಂಚಾಯಿತಿ ಸಿಬ್ಬಂದಿಗಳು, ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಸಭೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.