Breaking News

ಕಳಂಜ ಗ್ರಾ.ಪಂ.ನಲ್ಲಿ ಗಾಂಧಿ ಜಯಂತಿ ಆಚರಣೆ

Advt_Headding_Middle

 

ಕಳಂಜ ಗ್ರಾ. ಪಂ.ನಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಗ್ರಾಮ ಸಭೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆ. ವಹಿಸಿದ್ದರು. ಗ್ರಾ. ಪಂ. ಸದಸ್ಯರಾದ ಬಾಲಕೃಷ್ಣ ಬೇರಿಕೆ, ಶ್ರೀಮತಿ ಪ್ರೇಮಲತಾ ಉಪಸ್ಥಿತರಿದ್ದರು. ಕಳಂಜ ಗ್ರಾ. ಪಂ. ವ್ಯಾಪ್ತಿಯ ಶಾಲಾ ಮುಖ್ಯ್ಯೋ ಪಾಧ್ಯಯರು, ಶಿಕ್ಷಕರು, ಆಶಾ ಕಾರ್ಯಕರ್ತರು, ಕಿರಿಯ ಅರೋಗ್ಯ ಸಹಾಯಕಿ ಶ್ರೀಮತಿ ಬೇಬಿ, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಎಂ.ಬಿ.ಕೆ ಶ್ರೀಮತಿ ಪುಷ್ಪ ಕಿಲಂಗೋಡಿ, ಎಲ್.ಸಿ.ಆರ್.ಪಿ.ಗಳು, ಗ್ರಾ. ಪಂ. ಗುರುತಿದ ಸ್ವಚ್ಛತಾ ಸೈನಿಕರು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸ್ವಚ್ಛತಾ ಪ್ರತಿಜ್ಞೆ ಕೈಗೊಳ್ಳಲಾಯಿತು. ಆಯ್ದ ವಿಶೇಷ ಚೇತನರಿಗೆ ಸಹಾಯಧನ ವಿತರಿಸಲಾಯಿತು. ಸ್ವಚ್ಛತಾ ಜಾಗೃತಿ ಮೂಡಿಸುವ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಕಳಂಜ ಅಂಗನವಾಡಿ ಕೇಂದ್ರದಲ್ಲಿ ಇನ್ಸಿನರೇಟರ್ ನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಬಳಿಕ ಮಹಿಳೆಯರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮಾಹಿತಿಯನ್ನು ಕಿ.ಆ.ಸ. ಶ್ರೀಮತಿ ಬೇಬಿ ನೀಡಿದರು. ನಂತರ ಕಳಂಜ ವಿಷ್ಣು ನಗರದಲ್ಲಿ ಗಾಂಧಿ ನಡಿಗೆ ಮಾಡಲಾಯಿತು. ಗ್ರಾಮ ಪಂಚಾಯತ್ ಗುರುತಿಸಿದ ಸ್ವಚ್ಛತಾ ಸೈನಿಕರಿಗೆ ಗುರುತಿನ ಪತ್ರ ಮತ್ತು ಟಿ ಶರ್ಟ್ ನ್ನು ನೀಡಲಾಯಿತು. ಗ್ರಾ.ಪಂ. ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.