ಕೊಲ್ಲಮೊಗ್ರು: ಶ್ರೀ. ಕ್ಷೇ.ಧ.ಗ್ರಾ.ಯೋ. ಸುಬ್ರಹ್ಮಣ್ಯ ಬಿ ಸಿ ಟ್ರಸ್ಟ್ ನೇತೃತ್ವದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ

Advt_Headding_Middle

 

ಗಾಂಧಿ ನಡಿಗೆಯೊಂದಿಗೆ ಘೋಷಣೆ, ಪ್ರತಿಜ್ಞಾ ಸ್ವೀಕಾರ

 

 

ಶ್ರೀ. ಕ್ಷೇ.ಧ.ಗ್ರಾ.ಯೋ. ಸುಬ್ರಹ್ಮಣ್ಯ ಬಿ ಸಿ ಟ್ರಸ್ಟ್ (ರಿ.) ಸುಬ್ರಹ್ಮಣ್ಯ ವಲಯ ಇದರ ವತಿಯಿಂದ ಕೊಲ್ಲಮೊಗ್ರ ಗ್ರಾಮದಲ್ಲಿ ಇಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರು, ಕೆ.ವಿ.ಜಿ. ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರ, ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ, ಕಿ.ಪ್ರಾ. ಶಾಲೆ ಗಡಿಕಲ್ಲು ಸಂಯುಕ್ತ ಆಶ್ರಯದಲ್ಲಿ ಗಾಂಧಿ ನಡಿಗೆ ಜಾಥಾ ಕಾರ್ಯಕ್ರಮ, ಘೋಷಣೆ, ಪ್ರತಿಜ್ಞಾ ಸ್ವೀಕಾರ ನಡೆಯಿತು.

ಕೊಲ್ಲಮೊಗ್ರುವಿನಿಂದ ಮುಖ್ಯ ರಸ್ತೆ ಮೂಲಕ ಗಾಂಧಿ ನಡಿಗೆ ಮೂಲಕ ಗಡಿಕಲ್ಲು ಶಾಲೆಗೆ ಸಾಗಲಾಯಿತು. ಅಲ್ಲಿ ಗಾಂಧಿ ಫೋಟೋಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಕಾರ್ಯಕ್ರಮಕ್ಕೆ ನಿವೃತ್ತ ಮುಖ್ಯಗುರುಗಳಾದ ಶಿವರಾಮ ಕುಂಞೆಟ್ಟಿ ದೀಪ ಪ್ರಜ್ವಲಸಿ ಬ್ಯಾಂಡ್ ಬಾರಿಸುವ ಮೂಲಕ್ಕೆ ಜಾಥಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸುಳ್ಯ ಇದರ ಸದಸ್ಯ ಮಣಿಕಂಠ ಕೊಳಗೆ, ಸಂಯೋಜಕ ಸತೀಶ ಟಿ.ಎನ್, ಗ್ರಾ. ಪಂ. ಸದಸ್ಯರಾದ ಅಶ್ವತ್ಥ್ ಯಲದಾಳು, ಮಾದವ ಚಾಂತಾಳ, ಮೋಹಿನಿ ಕಟ್ಟ, ಶಿವಮ್ಮ ಕಟ್ಟ, ಬಂಗ್ಲಗುಡ್ಡೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್, ಮಾಜಿ ಗ್ರಾ.ಪಂ ಸದಸ್ಯ ಶೇಖರ್ ಅಂಬೆಕಲ್ಲು, ಗಡಿಕಲ್ಲು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಯೊಗೀಶ, ಶೇಖರ ಕೊಂದಾಳ, ವಿಪತ್ತು ನಿರ್ವಹಣ ಸದಸ್ಯರುಗಳಾದ ಬಾಲಸುಬ್ರಹ್ಮಣ್ಯ, ಲಕ್ಷ್ಮಣ ಐನೆಕಿದು, ಹರ್ಷ ಅಡ್ನೂರು ಮಜಲು, ಶ್ರೀನಿವಾಸ ಕಟ್ಟ, ಯಶವಂತ ಕಾಜಿಮಡ್ಕ, ಮೋನಪ್ಪ ನಾಯ್ಕ, ಕೆವಿಜಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪಿ ಕೆ ಸುರೇಶ, ಕೊಲ್ಲಮೊಗ್ರು ಒಕ್ಕೂಟದ ಅಧ್ಯಕ್ಷ ಜನಾರ್ದನ ದೋಣಿಪಳ್ಳ, ಸೇವಾ ಪ್ರತಿನಿಧಿ ಸಾವಿತ್ರಿ ಚಿನ್ನಪ್ಪ, ಶೋಬಾ, ಅ ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು , ಶಾಲಾ ಶಿಕ್ಷಕ ವೃಂದ, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಮಣಿಕಂಠ ಕಟ್ಟ ಸ್ವಾಗತಿಸಿ, ಮಾದವ ಚಾಂತಾಳ ವಂದಿಸಿದರು. ವಲಯ ಮೇಲ್ವಿಚಾರಕ ಸೀತಾರಾಮ ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.