Breaking News

ಪಂಜ: ಪಶು ವೈದ್ಯಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್ ಪಶುಸಂಗೋಪನಾ ಇಲಾಖೆಯಿಂದ ಸ್ವಯಂ ನಿವೃತ್ತಿ

Advt_Headding_Middle

 

 

 

ಪಂಜ: ಪಶು ವೈದ್ಯಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್ ಪಶುಸಂಗೋಪನಾ ಇಲಾಖೆಯಿಂದ ಸ್ವಯಂ ನಿವೃತ್ತಿ

ಪಶು ಸಂಗೋಪನಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಯಾಗಿದ್ದ ಡಾ. ದೇವಿಪ್ರಸಾದ್ ಕಾನತ್ತೂರ್ ರವರು ಸುದೀರ್ಘ 35 ವರ್ಷಗಳ ಸೇವೆ ಯಿಂದ ಸೆ.30 ರಂದು ಸ್ವಯಂ ನಿವೃತ್ತಿ ಹೊಂದಿದರು. ಮುಂದೆ ಪಶು ವೈದ್ಯ ಸೇವೆಯಲ್ಲಿಯೇ ತನ್ನನ್ನು ತೊಡಗಿಸಿ ಕೊಳ್ಳಲಿದ್ದಾರೆ.ಮೂಲತಃ ಕೇರಳದ ಕಾನತ್ತೂರು ನಾಲ್ವರ್ ದೈವಸ್ಥಾನದ ಅನುವಂಶಿಕ ಮೊಕ್ತೇಸರರಾಗಿದ್ದ ದಿ.ಕೆ.ಪಿ.ಮಾಧವನ್ ನಾಯರ್ ರವರ ಪುತ್ರರಾದ ಇವರು ಪ್ರಸ್ತುತ 33 ವರ್ಷಗಳಿಂದ ಪಂಜದ ಕೃಷ್ಣ ನಗರದಲ್ಲಿ ವಾಸವಾಗಿದ್ದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿಯಾಗಿ, ಪಂಜ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಯಾಗಿ , ಪಂಜ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹಲವು ಜನಪರ ಕೆಲಸಗಳ ಮೂಲಕ ಪಂಜ ಪರಿಸರದ ಜನರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಅಲ್ಲದೇ ಕಳೆದ 35 ವರ್ಷಗಳ ಪಶುವೈದ್ಯ ಸೇವೆಯಲ್ಲಿ ಸುಳ್ಯ ಹಾಗೂ ಕಡಬ ತಾಲೂಕಿನ ಗೋಪಾಲಕರ ಮೆಚ್ಚುಗೆಗೆ ಪಾತ್ರರಾಗಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಇವರ ಪತ್ನಿ ಶ್ರೀಮತಿ ಪುಷ್ಪಾ ಗೃಹಿಣಿಯಾಗಿದ್ದು , ಪುತ್ರ ಪುನೀತ್ ಕಾನತ್ತೂರ್ ಇಂಜಿನಿಯರಿಂಗ್ ಮುಗಿಸಿ ಮಂಗಳೂರಿನಲ್ಲಿ ಸ್ವಂತ ಕಾರ್ ಕಾರ್ಡಿಯಾಕ್ ಕೇರ್ ಸಂಸ್ಥೆ ಸ್ಥಾಪಿಸಿರುತ್ತಾರೆ. ಸೊಸೆ ಐಶ್ವರ್ಯ ಗೃಹಿಣಿಯಾಗಿದ್ದು ಮೊಮ್ಮಗಳು ಪ್ರಿಷಾ ಯು.ಕೆ.ಜಿ ವಿದ್ಯಾರ್ಥಿನಿ.
ಇವರ ಪುತ್ರಿ ಪೂಜಾ ಎಂ ಎಸ್ಸಿ ಪದವೀಧರೆಯಾಗಿದ್ದು ಅಳಿಯ ಅರುಣ್ ಇಂಜಿನಿಯರಿಂಗ್ ಮುಗಿಸಿ ಕಾಂಞಂಗಾಡ್ ನಲ್ಲಿ ಸ್ವಂತ ಕಾರ್ ಕಾರ್ಡಿಕ್ ಕೇರ್ ಸಂಸ್ಥೆಯನ್ನು ಸ್ಥಾಪಿಸಿರುತ್ತಾರೆ. ಮೊಮ್ಮಗಳು ಒಂದು ವರುಷ ಪ್ರಾಯದ ಆಶ್ವಿ .

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.