Breaking News

ಕೆ.ವಿ.ಜಿ. ಪಾಲಿಟೆಕ್ನಿಕ್ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ದೇರಣ್ಣ ರೈ ನಿವೃತ್ತಿ

Advt_Headding_Middle

 

ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ದೇರಣ್ಣ ರೈ ಯವರು ಸೆ. 30ರಂದು ನಿವೃತ್ತಿ ಹೊಂದಿದರು.
ಕಾಸರಗೋಡು ತಾಲೂಕಿನ ಬಳಿಂಜಗುತ್ತು ಮಹಾಲಿಂಗ ರೈ ಮತ್ತು ಕಾಸರಗೋಡು ತಾಲೂಕಿನ ಚಿಪ್ಪಾರುಗುತ್ತು ಮಂಜಕ್ಕ ರೈ ದಂಪತಿಯ 7ನೇ ಮಗನಾಗಿ 1961 ಸೆ. 26ರಂದು ಬಾಳಿಲ ಗ್ರಾಮದ ಬೊಮ್ಮನಮಜಲು ಎಂಬಲ್ಲಿ ಜನಿಸಿದ ದೇರಣ್ಣ ರೈ ಯವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ವಿದ್ಯಾಬೋಧಿನೀ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಪೂರೈಸಿ ಸುಳ್ಯದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಬಳಿಕ ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮಾ ಇಂಜಿನಿಯರಿಂಗ್ ಪದವಿಯನ್ನು 1985ರಲ್ಲಿ ಪಡೆದು ಮುಂಬಯಿಯ ಇಂಡಸ್ಟ್ರಿಯಲ್ ಇಕ್ಯುಪ್ ಮೆಂಟ್ ಕಂಪನಿಯಲ್ಲಿ ಶಾಫ್ ಪ್ಲೋರ್ ಇಂಜಿನಿಯರ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ 1986ರ ಸೆ. 1ರಂದು ಕೆ.ವಿ.ಜಿ. ಪಾಲಿಟೆಕ್ನಿಕ್ ನಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇವೆಗೆ ಹಾಜರಾದರು. ಬಳಿಕ 1991ರಲ್ಲಿ ಉಪನ್ಯಾಸಕರಾಗಿ, 2009ರಲ್ಲಿ ಹಿರಿಯ ಉಪನ್ಯಾಸಕರಾಗಿ ಮತ್ತು ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ ಭಡ್ತಿಹೊಂದಿ 2019ರಲ್ಲಿ ವಿಭಾಗ ಮುಖ್ಯಸ್ಥರಾಗಿ ನೇಮಕಗೊಂಡರು.
1989ರಲ್ಲಿ ಬೆಳಿಂಜಗುತ್ತು ಮಾರಪ್ಪ ಭಂಡಾರಿ ಮತ್ತು ಮಾಯಿಲಪ್ಪಾಡಿ ನಡುಮನೆ ದೇವಕಿ ಎಂ. ಭಂಡಾರಿ ದಂಪತಿಯ ಪುತ್ರಿ ಸಾವಿತ್ರಿಯವರೊಂದಿಗೆ ವಿವಾಹ ನಡೆಯಿತು. ಇವರ ಪುತ್ರಿ ಮಾನಸ ಡಿ. ರೈಯವರು ಎಂ.ಟೆಕ್ ಪದವೀಧರರಾಗಿದ್ದು, ತುಮಕೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕ್ವಾಲಿಟಿ ಇಂಜಿನಿಯರ್ ಆಗಿರುವ ರಮೇಶ್ ರೈಯವರನ್ನು ವಿವಾಹವಾಗಿದ್ದಾರೆ. ಇನ್ನೊರ್ವ ಪುತ್ರಿ ಕು. ಮೈಥಿಲೀ ಎಂ.ಬಿ.ಎ. ಪದವೀಧರರಾಗಿದ್ದಾರೆ. ದೇರಣ್ಣ ರೈಯವರು ಶಾಲಾ ದಿನಗಳಲ್ಲಿ ಕಬಡ್ಡಿ, ವಾಲಿಬಾಲ್, ಫುಟ್ಬಾಲ್ ಆಟಗಾರರಾಗಿದ್ದರಲ್ಲದೆ ಚಕ್ರ ಎಸೆತದಲ್ಲಿ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.