Breaking News

ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಶಿಕ್ಷಕಿ ಶೀಲಾರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

Advt_Headding_Middle

 

 

ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಸುದೀರ್ಘ19 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ನಿವೃತ್ತಿ ಹೊಂದಿದ ಶಿಕ್ಷಕಿ ಶಿಲಾ ಪಿ. ಯವರಿಗೆ ಬೀಳ್ಕೊಡುಗೆ ಸಮಾರಂಭ ಸೆ.30 ರಂದು ಸೈಂಟ್ ಬ್ರಿಜಿಡ್ಸ್ ಸಭಾಂಗಣದಲ್ಲಿ ನಡೆಯಿತು.
ಶಿಕ್ಷಕಿ ಶಿಲಾ ಅವರಿಗೆ ಶಾಲಾ ಆಡಳಿತ ಮಂಡಳಿ, ಪೊಷಕ ಸಮಿತಿ,ಶಿಕ್ಷಕರು,ಹಳೆ ವಿದ್ಯಾರ್ಥಿಗಳು,ಮತ್ತು ವಿದ್ಯಾರ್ಥಿಗಳು ಸೇರಿ ಶಿಕ್ಷಕಿ‌ ಶಿಲಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಪಾ ವಿಕ್ಟರ್ ಡಿಸೋಜ ವಹಿಸಿದ್ದರು.
ಬಿಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿ ಸ್ತ್ರೀ ರೋಗ ತಜ್ಞೆ ಡಾ.ವೀಣಾ ಮಾತನಾಡಿ “ಶಿಕ್ಷಕಿ ಶೀಲಾ ರವರು ಹೆಸರಿಗೆ ತಕ್ಕಂತೆ ಶೀಲವಂತೆ,ಗುಣವಂತೆ,ನಿಷ್ಠಾವಂತೆ, ಹಾಗೂ ಶೇಷ್ಠ ವ್ಯಕ್ತಿತ್ವ ಶ್ರೀಮಂತಿಕೆಯಿಂದ ಕಂಗೊಳಿಸಿದ್ದಾರೆ.ಇಂಗ್ಲಿಷ್ ಬಾಷೆಯಲ್ಲಿ ಉತ್ತಮ ಪಾಂಡಿತ್ಯವನ್ನು ಹೊಂದಿದ್ದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಸ್ತಿನ ಶಿಕ್ಷಕಿಯಾಗಿದ್ದರು.
ವಿದ್ಯಾರ್ಥಿಗಳ ಏಳಿಗೆಗಾಗಿ ನಿಸ್ವಾರ್ಥ ಹಾಗೂ ಪ್ರಾಮಾಣಿಕತೆಯಿಂದ ದುಡಿದ್ದಾರೆ ಅವರ ಮುಂದಿನ ಜೀವನ ಸಂತೋಷಮಯ ವಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಪ್ರೌಢಶಾಲಾ ಪೊಷಕ ಸಮಿತಿ ಅಧ್ಯಕ್ಷೆ ಶ್ರೀಮತಿ ಅಕ್ಷತಾ ಶೆಟ್ಟಿ, ಪ್ರಾಥಮಿಕ ಶಾಲಾ ಪೋಷಕ ಸಮಿತಿ ಅಧ್ಯಕ್ಷ ಅರುಳಪ್ಪನ್,ಸೈಂಟ್ ಬ್ರಿಜಿದ್ ಪಾಲನ ಸಮಿತಿ ಪಾಲನಾ ಮಂಡಳಿ ಕಾರ್ಯದರ್ಶಿ ಶ್ರೀಮತಿ ಜೂಲಿಯ ಕ್ರಾಸ್ತ,ಮುಖ್ಯ ಶಿಕ್ಷಕಿ ಬಿನೋಮ,ಶಾಲಾ ವಿದ್ಯಾರ್ಥಿ ನಾಯಕ ಚಿರಂತನ್,ಉಪನಾಯಕಿ ನಾದಿಯ ಉಪಸ್ಥಿತರಿದ್ದರು.
ಶಿಕ್ಷಕಿ ಸೋಜಾ ಸಾಜು ಸನ್ಮಾನ ಪತ್ರವಾಚಿಸಿದರು.
ಶಿಕ್ಷಕರ ಪರವಾಗಿ ಶಿಕ್ಷಕಿ ರೀಟಲತಾ ಡಿಸಿಲ್ವ,ಶಿಕ್ಷಕಿ ಗೀತಾಲಕ್ಮಿ,ಹಳೆ ವಿದ್ಯಾರ್ಥಿಗಳ ಪರವಾಗಿ ಚೈತ್ರ ಪೈಚಾರ್, ಶುಭ ಹಾರೈಸಿದರು.
ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ,ಗುರುವಂದನೆ ಕಾರ್ಯಕ್ರಮ ಹಾಗೂ ಶಿಕ್ಷಕಿಯರಿಂದ ಮತ್ತು ವಿದ್ಯಾರ್ಥಿಗಳಿಂದ ವಿದಾಯ ಗೀತೆ ಮತ್ತು ಶಿಕ್ಷಕಿ ಶೀಲಾರವರ ಜೀವನದ ಸ್ಲೈಡ್ ಶೋ ಪ್ರದರ್ಶನ ನಡೆಯಿತು.
ಶಿಕ್ಷಕಿ ಪ್ರೆಸಿಲ್ಲಾ ಪಿಂಟೊ ಸ್ವಾಗತಿಸಿ, ಶಿಕ್ಷಕಿ ಚೈತ್ರ ಆಳ್ವ ವಂದಿಸಿದರು.
ಶಿಕ್ಷಕಿ ಅನಿತಾ ಮಸ್ಕರೇಂನಸ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.