Breaking News

ಬಳ್ಪ ಗ್ರಾ.ಪಂ.ನಲ್ಲಿ ಗಾಂಧಿಜಯಂತಿ ಆಚರಣೆ

Advt_Headding_Middle

 

 

ಬಳ್ಪ ಗ್ರಾ. ಪಂ.ನಲ್ಲಿ ನಡೆದ ಗಾಂಧಿ ನಡಿಗೆ ಸ್ವಚ್ಛತೆ ಕಡೆಗೆ ಕಾರ್ಯಕ್ರಮನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್. ರೈ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ. ಪಂ. ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ, ಸದಸ್ಯರಾದ ಶಶಿಕಲಾ, ಶೈಲಜಾ ಎಣ್ಣೆಮಜಲು, ದಿವಾಕರ, ಪ್ರಶಾಂತ್ ಪೊಟ್ಟುಕೆರೆ, ರಾಜೀವ್ ಕಣ್ಕಲ್, ಪಿ.ಡಿ ಪಾರ್ವತಿ, ಹರ್ಷಿತ್ ಕಾರ್ಜ, ಚಂದ್ರಶೇಖರ ಅಕ್ಕೇಣಿ, ಸುನೀತಾ ಸಂಪ್ಯಾಡಿ ಹಾಗೂ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಿರಿಜಾ, ಬಳ್ಪ ಗ್ರಾ. ಪಂ. ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಯಮುನಾ ಕಾರ್ಜ, ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋನಪ್ಪ ಡಿ, ಬಳ್ಪ ಶಾಲಾ ಸಹಶಿಕ್ಷಕ ಆನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪಂಚಾಯತ್ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತರು, ಊರವರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸೋಪ್ ಕಿಟ್ ಅಭಿಯಾನ ಯೋಜನೆಯಡಿ ಚಂದ್ರಕಾಂತ ಮತಾವು ಇವರ ಮನೆಯಲ್ಲಿ ಘನತ್ಯಾಜ್ಯ ದ್ರವ್ಯ ಗುಂಡಿಗೆ ಚಾಲನೆ ನೀಡಲಾಯಿತು. ಹಾಗೂ ಪಂಚಾಯತ್ ಆವರಣ ಮತ್ತು ಪೇಟೆಗಳಲ್ಲಿ ಸ್ವಚ್ಚತೆ ಮಾಡಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ವಾಗತಿಸಿ, ಸ್ವಚ್ಛತೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಯಮುನಾ ಕಾರ್ಜ ಧನ್ಯವಾದವಿತ್ತರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.