Breaking News

ಅಕ್ರಮ – ಸಕ್ರಮ ಕಡತ : ದಲ್ಲಾಳಿಗಳನ್ನು ದೂರವಿಡಲು ಆಗ್ರಹ

Advt_Headding_Middle

 

ಸಮಸ್ಯೆ ಮುಂದುವರಿದರೆ ಪ್ರತಿಭಟನೆ : ಕಾಂಗ್ರೆಸ್ ಎಚ್ಚರಿಕೆ

ಅಕ್ರಮ – ಸಕ್ರಮ ಕಡತ ಮಂಜೂರಾಗಬೇಕಾದರೆ ದಲ್ಲಾಳಿಗಳ ಮೂಲಕ ಹೋಗಬೇಕಾದ ಸ್ಥಿತಿ ಇದೆ. ಇದರಿಂದಾಗಿ ಹಲವು ಕಡತ ಬಾಕಿ ಇದ್ದು ಜವಾಬ್ದಾರಿಯುತ ಜನಪ್ರತಿನಿಧಿಗಳು ಸಮಸ್ಯೆ ಬಗೆ ಹರಿಸಬೇಕು. ಹೀಗೆ ಮುಂದುವರಿದರೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪರಶುರಾಮ ಚಿಲ್ತಡ್ಕ ಹೇಳಿದ್ದಾರೆ.
ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಕ್ರಮ ಸಕ್ರಮ ಕಡತಕ್ಕೆ ದಲ್ಲಾಳಿಗಳು ಹಣ ಕೇಳುವ ಬಗ್ಗೆ ನಮಗೆ ದೂರು ಬರುತ್ತಿದೆ. ಇದು ಸರಿಯಲ್ಲ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಇದನ್ನು ಶಾಸಕರು ಅರಿತು ಸಮಸ್ಯೆ ಬಗೆ ಹರಿಸಬೇಕಾಗಿದೆ ಎಂದು ಅವರು ಹೇಳಿದರು.
ಗುತ್ತಿಗಾರು ಬೆಳೆಯುತ್ತಿರುವ ಪೇಟೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇಲ್ಲಿಗೆ ೧೦೮ ವಾಹನ ಅಗತ್ಯವಿದ್ದು ಅದನ್ನು ಸುಳ್ಯ ಶಾಸಕರು ಒದಗಿಸಿ ಕೊಡಬೇಕಾಗಿದೆ. ಗುತ್ತಿಗಾರಿಗೆ ಈಗ ಬರುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ಮುತ್ತಪ್ಪ ನಗರ ತನಕ ಹೋಗಿ ತಿರುಗಿ ಬರಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಿದೆ. ಗುತ್ತಿಗಾರು – ಕಮಿಲ – ಬಳ್ಪ ರಸ್ತೆ ತೀರಾ ಹದಗೆಟ್ಟಿದ್ದು ಆ ರಸ್ತೆ ಕಾಂಕ್ರೀಟೀಕರಣಗೊಳ್ಳಬೇಕು ಎಂದು ಅವರು ಹೇಳಿದರು.
ಗುತ್ತಿಗಾರಿನಲ್ಲಿ ೩೩ ಕೆವಿ ವಿದ್ಯುತ್ ಸಬ್‌ಸ್ಟೇಶನ್ ಆಗಿದ್ದು ಅದು ಶೀಘ್ರ ಚಾರ್ಚ್ ಆಗಬೇಕೆಂದು ನಾವು ಒತ್ತಾಯಿಸುತ್ತೇವೆ. ಆದರೆ ಇದೀಗ ಬಿಜೆಪಿ ಯೊಳಗಿನ ಗೊಂದಲದಿಂದಾಗಿ ಅದು ಆಗಿಲ್ಲ. ಅವರಲ್ಲಿ ಒಬ್ಬರು ಬೇಕು ಎಂದು ಹೇಳಿದರೆ ಮತ್ತೊಬ್ಬರು ಬೇಡ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಹೇಳಿದರು.
ಮೊಗ್ರ ಸೇತುವೆ ಆಗಬೇಕೆಂದು ಆ ಭಾಗದ ಜನರು ಹಲವು ವರ್ಷದಿಂದ ಬೇಡಿಕೆ ಇಡುತ್ತಿದ್ದಾರೆ. ಆದರೆ ಹಳ್ಳಿಯಿಂದ ಡೆಲ್ಲಿಯ ತನಕ ಆಡಳಿತವಿರುವ ಬಿಜೆಪಿಯವರಿಗೆ ಅದನ್ನು ಮಾಡಲು ಸಾಧ್ಯವಾಗಿಲ್ಲ. ಬಳಿಕ ಊರವರೇ ಮಾಡಬೇಕಾದ ಸ್ಥಿತಿ ಬಂತು. ಆ ಸೇತುವೆ ನಬಾರ್ಡ್‌ನಲ್ಲಿ ಸೇರಿದೆ ಎಂದು ಹಿಂದೆ ಮುಳಿಯ ಕೇಶವ ಭಟ್‌ರು ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿದ್ದರು. ಆದರೆ ಸೇತುವೆಗೆ ಮಾತ್ರ ಅನುದಾನ ಬರಲೇ ಇಲ್ಲ ಎಂದು ಗುತ್ತಿಗಾರು ಗ್ರಾಮ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಸರಸ್ವತಿಮಹಲ್ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸನತ್ ಮುಳುಗಾಡು, ಗುತ್ತಿಗಾರು ಕಾಂಗ್ರೆಸ್ ಅಧ್ಯಕ್ಷ ಪರಮೆಶ್ವರ ಚನಿಲ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.