Breaking News

ಸುಳ್ಯ: ರೋಟರಿ ವಿದ್ಯಾ ಸಂಸ್ಥೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ, ಶಿಕ್ಷಕ ಅಚ್ಯುತ ಅಟ್ಲೂರ್ ರವರಿಗೆ ಸನ್ಮಾನ

Advt_Headding_Middle

 

 

ಅ.2ರಂದು ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಚ್ಯುತ ಅಟ್ಲೂರ್ ರವರಿಗೆ ಸನ್ಮಾನ ಸಮಾರಂಭ ಅ. 2ರಂದು ನಡೆಯಿತು.
ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ರೋ. ರಾಮಚಂದ್ರ ಪಿ. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸರ್ವ ಧರ್ಮ ಪ್ರಾರ್ಥನೆಯ ನಂತರ
ವಿದ್ಯಾರ್ಥಿಗಳಾದ ಮೊಹಮ್ಮದ್ ರಾಹಿಲ್, ದ್ರುವ ಟಿ ಎಸ್, ಕು.ಅನುಜ್ಞಾ, ಕು. ಸಾನಿಧ್ಯ ಎಸ್. ಆಚಾರ್ಯ, ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಬಗ್ಗೆ ಮಾತನಾಡಿದರು. ನಂತರ ಚಿತ್ರಕಲಾ ಶಿಕ್ಷಕ ಪದ್ಮನಾಭ ಕೊಯಿನಾಡು ಗಾಂಧಿಯವರ ಬಗ್ಗೆ ಸ್ವರಚಿತ ಕವನ ವಾಚಿಸಿದರು. ಶಿಕ್ಷಕಿ ಶ್ರೀಮತಿ ಜಯಶ್ರೀ ಕುಕ್ಕೆಟ್ಟಿ ದಿನದ ಮಹತ್ವವನ್ನು ವರ್ಣಿಸಿದರು.
ನಂತರ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಚ್ಯುತ ಅಟ್ಲೂರು ರವರನ್ನು ಫಲ, ಪುಷ್ಪ, ಶಾಲು, ಹಾರ, ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಸಂಸ್ಥೆಯ ಸಂಚಾಲಕರಾದ ರೊ. ಗಿರಿಜಾಶಂಕರ್ ತುದಿಯಡ್ಕ ರವರು ಗಾಂಧಿಜಿಯ ಸರಳತೆ ಹಾಗೂ ಲಾಲ್ ಬಹಾದ್ದೂರ್ ಯವರ ಪ್ರಾಮಾಣಿಕತೆ, ಬಗ್ಗೆ ಮಾತನಾಡುವುದರ ಜೊತೆಗೆ ಶಿಕ್ಷಕರನ್ನು ಗೌರವಿಸಿದ್ದರಿಂದ ಡಾI ಸರ್ವೆಪಲ್ಲಿ ರಾಧಾಕೃಷ್ಣನ್ ರವರನ್ನು ನೆನಪಿಸಿಕೊಂಡು ಅವರು ಕಾರ್ಯ ದಕ್ಷತೆಯಿಂದ ಪಡೆದುಕೊಂಡ ಶ್ರೇಷ್ಠ ಸ್ಥಾನವನ್ನು ವಿವರಿಸಿದರು. ಆಡಳಿತ ಮಂಡಳಿ ಸದಸ್ಯರಾದ ರೊ. ಬಿ. ಬೆಳ್ಯಪ್ಪ ಗೌಡ ಶುಭಹಾರೈಸುತ್ತಾ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಹ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಅಭಿನಂದನಾ ಭಾಷಣ ಮಾಡಿದರು. ಸನ್ಮಾನ ಸ್ವೀಕರಿಸಿದ ಅಚ್ಯುತ ಅಟ್ಲೂರ್ ಮಾತನಾಡುತ್ತಾ ಕೂಡಿಬಾಳುವುದರಲ್ಲಿಯೇ ನಿಜವಾದ ಸಂತೋಷ ಇದೆ ಎಂದರು. ಆಡಳಿತ ಮಂಡಳಿ ಸದಸ್ಯರಾದ ರೊ.ಡಾI ಪುರುಷೋತ್ತಮ ಕೆ.ಜಿ, ರೊ. ಮಹಾಲಕ್ಷ್ಮಿ ಕೋರಂಬಡ್ಕ, ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ವೈಷ್ಣವಿ ಶೆಟ್ಟಿ ಸ್ವಾಗತಿಸಿ, ಅನೂಪ್ ವೈ. ವಂದಿಸಿದರು. ಕು. ಕೀರ್ತನ ಹಾಗೂ ಕು. ಪ್ರಣಮ್ಯ ಆಳ್ವ ಕಾರ್ಯ ಕ್ರಮ ನಿರೂಪಿಸಿದರು. ಶಿಕ್ಷಕರಾದ ಪದ್ಮನಾಭ ಕೊಯಿನಾಡು, ಶ್ರೀಹರಿ ಪೈಂದೋಡಿ, ಮಂಜುನಾಥ ಎ.ಯು, ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.