ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಮೂಲ ಕಾರಣ ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರ – ಅಮೃತ್ ಹೆಚ್.ವಿ. ಆಲೂರು

Advt_Headding_Middle

ಸಾಯಿರಾಂ…
ಕನಸು ನನಸಾದ ಈ ಹೊತ್ತಿನಲ್ಲಿ ಏನು ಹೇಳಬೇಕೆಂಬುದು ತೋಚದ ಸ್ಥಿತಿಯಲ್ಲಿದ್ದೇನೆ.
ಪ್ರೀತಿಯಿಂದಲೂ ವಿನಯದಿಂದಲೂ ನನ್ನ ಶಾಲೆಯ ಬಗೆಗೆ ನಾಲ್ಕು ಮಾತು ಬರೆಯುತ್ತಿದ್ದೇನೆ.ಸ

ಸತ್ಯಸಾಯಿವಿದ್ಯಾಕೇಂದ್ರ ಚೊಕ್ಕಾಡಿ!

ಐದನೇ ತರಗತಿ ಹಾಸನದಲ್ಲಿ ಮುಗಿಸಿ ಮುಂದಿನ ವಿದ್ಯೆಗೆ ವಸತಿ ಶಾಲೆಗೆ ಸೇರಿಸಬೇಕೆಂಬ ಅಪ್ಪ ಅಮ್ಮನ ನಿರ್ಧಾರಕ್ಕೆ ಮೊದಲು ಆಯ್ಕೆಯಾಗಿದ್ದು ಸತ್ಯಸಾಯಿ ಶಾಲೆ.
ಅಮ್ಮನನ್ನು ಬಿಟ್ಟಿರಲಾಗದ ಆ ಹೊತ್ತಿಗೆ ಮನೆಯಿಂದ ಮುನ್ನೂರು ಕಿಮೀ ದೂರದ ವಸತಿ ಶಾಲೆ ಎಂದರೆ ಮಹಾಕಷ್ಟವೇ ಸರಿ.
ಅಳುತ್ತಿದ್ದವನನ್ನು ಸಂತೈಸಿ ಒಳಗೆ ಕರೆದುಕೊಂಡ ಹೋಗಿದ್ದು ಅಲ್ಲಿನ ಅಕ್ಕಂದಿರು.
ವಸತಿ ಶಾಲೆಯ ಮಕ್ಕಳಿಗೆ ಮುಖ್ಯವಾಗಿ ಬೇಕಿರುವುದು ಶುಚಿರುಚಿ ಊಟ. ಇವತ್ತಿಗೂ ಹಾಸ್ಟೆಲ್ ಊಟ ನನ್ನ ನೆನಪಿನಲ್ಲಿ ಉಳಿದಿದೆ.
ಮನೆಯೇ ಮೊದಲ ಪಾಠಶಾಲೆ ಆಗುವುದಾದರೆ ಶಾಲೆ ಎರಡನೇ ತಾಯಿ. ಅಲ್ಲಿನ ಪ್ರತಿ ಟೀಚರ್ಸ್ ನನ್ನ ವ್ಯಕ್ತಿತ್ವ ರೂಪಿಸಿದ್ದಾರೆ. ನನ್ನ ಅತೀ ತುಂಟತನವನ್ನು ಸಹಿಸಿಕೊಂಡಿದ್ದಾರೆ.
ಅಮ್ಮ ನೋಡ್ಲಿಕ್ಕೆ ಬಂದಾಗ ನನ್ನ ಕುರಿತು ಕಂಪ್ಲೈಂಟ್ ಹೇಳುತ್ತಲೇ ನನ್ನ ಏಕಾಗ್ರತೆ ಹೊಗಳಿ ಆತ್ಮವಿಶ್ವಾಸ ತುಂಬಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಯುಪಿಎಸ್ಸಿ ಪರೀಕ್ಷೆ ಕಠಿಣ ಪರೀಕ್ಷೆಯೇ.
ಆದರೆ
ಎದುರಿಸಲಾಗದ ಪರೀಕ್ಷೆಯೇನಲ್ಲ.
ಬಹುತೇಕ ಯುಪಿಎಸ್ಸಿ ಯ ಸಿಲಬಸ್ ನಮ್ಮ ಐದರಿಂದ ಹತ್ತನೆ ತರಗತಿಯ ಪಠ್ಯದ ಮೂಲದಿಂದಲೇ ಇರುತ್ತದೆ.
ಹಾಗಾಗಿ ಆ ಅವಧಿಯಲ್ಲಿ ನಾವು ಕಲಿತಿದ್ದು ಎಷ್ಟು ಆಳವಾಗಿ ನಮ್ಮೊಳಗೆ ಇಳಿದಿರುತ್ತದೋ ಅಷ್ಟು ಸಹಜವಾಗಿ ಯುಪಿಎಸ್ಸಿಯ ಪಠ್ಯಗಳನ್ನು ಓದಬಹುದು.
ಆ ನಿಟ್ಟಿನಲ್ಲಿ ನಾನು ಅದೃಷ್ಟವಂತ.
ಸತ್ಯಸಾಯಿ ಶಾಲೆ ಈ ಅವಧಿಯ ನನ್ನ ಓದನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಶ್ರೇಷ್ಟವಾಗಿ ನನ್ನೊಳಗೆ ಇಳಿಸಿದೆ.
ಥ್ಯಾಂಕ್ಸ್ ಟು ಮೈ ಟೀಚರ್ಸ್.
ಇಂದಿನ ನನ್ನ ಸಾಧನೆಗೆ ಮೂಲ ಕಾರಣ ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಅಂತ ಬಹಳ ಧೃಡವಾಗಿ ಹೇಳಬಲ್ಲೆ.
ಮತ್ತೊಮ್ಮೆ ಶಾಲೆಗೆ ಪ್ರೀತಿಯ ಧನ್ಯವಾದ ತಿಳಿಸುತ್ತಾ ನನ್ನ ಮಾತು ಮುಗಿಸುತ್ತೇನೆ.
ಸಾಯಿರಾಂ.
ಅಮೃತ್ ಹೆಚ್.ವಿ
ಹಳೆ ವಿದ್ಯಾರ್ಥಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.