Breaking News

ಸ.ಪ.ಪೂ.ಕಾಲೇಜಿನಲ್ಲಿ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಗಾಂಧೀ ಜಯಂತಿ ಆಚರಣೆ,ಪ್ರತಿಭಾ ಪುರಸ್ಕಾರ

Advt_Headding_Middle

 

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ನಿರ್ಮಾಣಗೊಂಡ ಧ್ಯಾನ ಮಂದಿರದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಗಾಂಧೀ ಜಯಂತಿ ಕಾರ್ಯಕ್ರಮ ಅ. 2 ರಂದು ನಡೆಯಿತು. ಧ್ಯಾನ ಮಂದಿರವನ್ನು ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು.
2020-21 ನೇ ಸಾಲಿನಲ್ಲಿ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮೂರನೇ ಹಾಗು ಐದನೇ ಸ್ಥಾನ ಪಡೆದ ಚಿನ್ಮಯಿ ಹಾಗು ಆಶಿಕಾ ಮತ್ತು ಉನ್ನತ ಶ್ರೇಣಿ ಪಡೆದ 19 ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರು ಅಭಿನಂದಿಸಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು.
ಧ್ಯಾನ ಮಂದಿರದ ದಾನಿಗಳು ಹಾಗೂ ಪದವಿಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾದ ಡಾ.ಗಿರೀಶ್ ಭಾರದ್ವಾಜ್ ಹಾಗೂ ಎ.ಓ.ಎಲ್.ಇ ನ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹಾದೇವ, ಎಸ್.ಎಸ್.ಎಲ್ .ಸಿ ಸಾಧಕರ ಬಹುಮಾನದ ಪ್ರಾಯೋಜಕರಾದ ಲೋಕಯ್ಯ ಗೌಡ ಎ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ, ಪ್ರಮುಖರಾದ ಎಂ.ಬಿ.ಸದಾಶಿವ, ಎಸ್.ಎಂ.ಬಾಪೂ ಸಾಹೇಬ್, ಡಾ.ರಂಗಯ್ಯ, ಯಶವಂತ್,
ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಶಂಕರ್ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಸ್ಥೆಯಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪೂರ್ಣಿಮಾ ವಂದಿಸಿದರು. ಮಮತಾ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಡಾ. ಸುಂದರ ಕೇನಾಜೆ, ನಟರಾಜು, ಪೂರ್ಣಿಮಾ ಟಿ. ಆಶಾಕುಮಾರಿ ಸಹಕರಿಸಿದರು.ಕಾರ್ಯಕ್ರಮಕ್ಕೆ ಮುನ್ನ ಮಹಾತ್ಮಾ ಗಾಂಧಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ಗಾಂಧಿ ನಡಿಗೆ, ಫಿಟ್ ಇಂಡಿಯಾ ರನ್ 2.0, ಗಾಂಧಿ ಸ್ಮೃತಿ, ನಡೆಯಿತು. ಪಬ್ಲಿಕ್ ಟಿ.ವಿ ಇವರು ಕೊಡಮಾಡಿದ 115 ಟ್ಯಾಬ್ ನ್ನು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಭರತ ನಾಟ್ಯ, ಯೋಗಾಸನ, ಯಕ್ಷಗಾನ ಸಂಯೋಜಿತ ಸರ್ವ ಧರ್ಮ ಪ್ರಾರ್ಥನೆಯು ನೆರವೇರಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.