ಪಂಜ : 6ನೇ ವರುಷದ ವಿದ್ಯಾರ್ಥಿ ವೇತನ ವಿತರಣೆ 

Advt_Headding_Middle

ಸಮಾಜಕ್ಕೆ ನೀಡುವ ಮೌಲ್ಯಗಳು ಶಾಶ್ವತ : ಕೆ.ವಿ.ದಾಮೋದರ ಗೌಡ

ಶ್ರೀ ಮಾಡಬಾಗಿಲು ಕಂಬಳ ಆನಂದಗೌಡ ಟ್ರಸ್ಟ್ ಕಂಬಳ ಇದರ ವತಿಯಿಂದ 6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಅ.2 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ಜರುಗಿತು. ಟ್ರಸ್ಟ್ ನ ಕಾರ್ಯಕಾರಿ ಸಮಿತಿ ಸದಸ್ಯ ಹೇಮಂತ್ ಕುಮಾರ್ ಕಂಬಳ ಸಭಾಧ್ಯಕ್ಷತೆ ವಹಿಸಿದ್ದರು .ಕಾರ್ಯಕ್ರಮವನ್ನು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ” ಮಾಡಿಬಾಗಿಲು ಕಂಬಳ ಆನಂದ ಗೌಡ ರವರದು ಕೃಷಿ ಕುಟುಂಬ ‌.ಕೃಷಿ ಕುಟುಂಬ ವೊಂದು ಈ ದೇಶದಲ್ಲಿಯೇ ಅಪರೂಪದ ವಿಶೇಷ ಕಾರ್ಯಕ್ರಮ ಮಾಡಿದೆ.ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆ ಪೂರಕವಾದ ವಿಶೇಷವಾದ ಮಾದರಿ ಕಾರ್ಯಕ್ರಮವಾಗಿದೆ.” ಎಂದರು. ಮುಖ್ಯ ಅತಿಥಿಗಳಾಗಿ ಸುಳ್ಯ ಎನ್ ಎಂ ಸಿ ನಿವೃತ್ತ ಪ್ರಾಂಶುಪಾಲ ಕೆ.ವಿ.ದಾಮೋದರ ಗೌಡ ರವರು ಮಾತನಾಡಿ ” ಕಾಲ ಬದಲಾದರೂ ನಮ್ಮ ಜೀವನದ ಮೌಲ್ಯಗಳು ಶಾಶ್ವತವಾಗಿ ಉಳಿಯುತ್ತದೆ. ಮೌಲ್ಯಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜಕ್ಕೆ ನೀಡಿದಾಗ ಸಾಮಾನ್ಯನು ಅಸಾಮಾನ್ಯನಾಗಿ ಮೆರೆಯುವುದಕ್ಕೆ ಕಂಬಳ ಆನಂದ ಗೌಡ ಉದಾಹರಣೆ. ಅವರ ವಿಶೇಷ ಕೊಡುಗೆಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹವಾಗುತ್ತದೆ”. ಎಂದು ಹೇಳಿದರು. ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ,ಪಂಜ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಟೈಟಸ್ ವರ್ಗೀಸ್ , ಕಾಲೇಜ್ ನ ಪ್ರಭಾರ ಪ್ರಾಂಶುಪಾಲ ವೆಂಕಪ್ಪ ಕೇನಾಜೆ,ಪಂಜ ಪ್ರೌಢ ಶಾಲಾ ವಿಭಾಗದ ಎಸ್‌ ಡಿ ಎಂ ಸಿ ಕಾರ್ಯಾಧ್ಯಕ್ಷ ನಾರಾಯಣ ನಡುಗುಡ್ಡೆ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸವಿತಾರ ಮುಡೂರು . ವೇದಿಕೆಯಲ್ಲಿ ಉಪಸ್ಥಿತರಿದ್ದರು . 2020-21ನೇ ಸಾಲಿನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕ ಗಳಿಸಿದ ಸುಳ್ಯ ಸ.ಪ.ಪೂ.ಕಾಲೇಜು ವಿದ್ಯಾರ್ಥಿಗಳಾದ ಸುಶ್ಮಿತಾ ಬಿ, ಅಮೃತಾ ಕೆ, ಬೆಳ್ಳಾರೆ ಕೆ.ಪಿ.ಸಿ.ವಿದ್ಯಾರ್ಥಿಗಳಾದ ರಶ್ಮಿ ಕೆ.ಎಂ., ಪ್ರಜ್ಞಾ ಎ.ಕೆ.,ತಸ್ವಿ ಕೆ.ಜೆ, ಮರ್ಕಂಜ ಸ. ಪ್ರೌಢ ಶಾಲೆಯ ವಿದ್ಯಾರ್ಥಿನಿ ವರ್ಷಾಕುಮಾರಿ ಕೆ.ಸಿ, ಎಣ್ಮೂರು ಸ.ಪ್ರೌಢಶಾಲಾ ವಿದ್ಯಾರ್ಥಿನಿ ಫಾತಿಮತ್ ರೂಬೀನಾ, ಎಡಮಂಗಲ ಸ.ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಾ. ಕೆ ತಲಾ ಪ್ರಶಸ್ತಿಯೊಂದಿಗೆ ರೂ.4250 ಪಡೆದರು.
ಗಣಿತದಲ್ಲಿ 100 ಅಂಕಗಳಿಸಿದ ಎಣ್ಮೂರು ಸ. ಪ್ರೌಢ ಶಾಲೆಯ ವಿದ್ಯಾರ್ಥಿ ನಿ ಫಾತಿಮತ್ ಮರ್ಝೂನಾ , ಸುಳ್ಯ ಸ.ಪ.ಪೂ.ಕಾಲೇಜು ವಿದ್ಯಾರ್ಥಿನಿ ಆಶಿತಾ ಎಂ, ಗುತ್ತಿಗಾರು ಸ.ಪ.ಪೂ ಕಾಲೇಜಿನ ನಿಶ್ಮಿತಾ , ಬೆಳ್ಳಾರೆ ಕೆ.ಪಿ.ಎಸ್ ವಿದ್ಯಾರ್ಥಿನಿ ಪದ್ಮಿನಿ ಸಿ,ಆರ್ , ಐವರ್ನಾಡು ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿ ಮೋಕ್ಷಿತ್ ಆರ್, ಪ್ರಶಸ್ತಿ ಮತ್ತು ತಲಾ ರೂ.6500 ಪಡೆದರು.
ವಿಜ್ಞಾನದಲ್ಲಿ 100 ಅಂಕಗಳಿಸಿದ ಸುಳ್ಯ ಸ.ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಪ್ರಜ್ಙಾಶ್ರೀ ಬಿ.ವಿ, ಕೀರ್ತನ್ ಕೆ.ಎಸ್, ಚಿನ್ಮಯಿ ಬಿ,ಎಣ್ಮೂರು ಸ.ಪ್ರೌಢಶಾಲೆಯ ವಿದ್ಯಾರ್ಥಿನಿ ತ್ರಿಷಾ ಎ, ಎಲಿಮಲೆ‌ ಸ. ಪ್ರೌಢಶಾಲಾಯ ವಿದ್ಯಾರ್ಥಿನಿ ಜನನಿ ಎಂ.ವಿ. ಪ್ರಶಸ್ತಿ ಮತ್ತು ತಲಾ ರೂ. 6500 ಪಡೆದರು.
ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ವಿತರಿಸಿ , ಪುರಸ್ಕರಿಸಿ ಗೌರವಿಸಲಾಯಿತು.ಶ್ರೀ ಮಾಡ ಬಾಗಿಲು ಕಂಬಳ ಆನಂದಗೌಡ ಟ್ರಸ್ಟ್ ವತಿಯಿಂದ
ಪ್ರತಿ ವರ್ಷ ವಿದ್ಯಾರ್ಥಿವೇತನ ವಿತರಿಸಲು ರೂ.10 ಲಕ್ಷ ಶಾಶ್ವತ ವಿದ್ಯಾನಿಧಿಯನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದ್ದು.ಇದರ ಬಡ್ಡಿ ಗಳಿಕೆಯನ್ನು. ಪ್ರತಿ ವರ್ಷ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ,ಗಣಿತ ,ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಹೇಮಂತ್ ಕುಮಾರ್ ಕಂಬಳ ಸ್ವಾಗತಿಸಿದರು. ಪುರುಷೋತ್ತಮ ದಂಬೆಕೋಡಿ ಪ್ರಾಸ್ತಾವಿಕಗೈದರು. ಶಿಕ್ಷಕ ಪುರಂದರ ಪನ್ಯಾಡಿ ನಿರೂಪಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟೈಟಸ್ ವರ್ಗೀಸ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.