Breaking News

ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಶಿಶಿಲರ ‘ಬೆಳಕಿನೆಡೆಗೆ’ ಲೋಕಾರ್ಪಣೆ

Advt_Headding_Middle

 

 

ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್ ಅವರ ಐವತ್ತನೇ ವರ್ಷದ ಹುಟ್ಟುಹಬ್ಬದ ಸುವರ್ಣ ಸಂಭ್ರಮ ಆಚರಣೆ ಸಮಿತಿಯ ವತಿಯಿಂದ ಅಜ್ಜ ತೆಕ್ಕಿಲ್ ಮಹಮ್ಮದ್ ಹಾಜಿ ಯವರ ದಿವ್ಯ ಸ್ಮರಣೆಗಾಗಿ ನೆಹರೂ ಸ್ಮಾರಕ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ಲೇಖಕ ಡಾ ಪ್ರಭಾಕರ ಶಿಶಿಲರು ಅವರ ಕೃತಿ ‘ಬೆಳಕಿನೆಡೆಗೆ’ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಮಡಿಕೇರಿಯ ಪತ್ರಿಕಾಭವನದಲ್ಲಿ ಅ. 2ರಂದು ಬಿಡುಗಡೆಗೊಳಿಸಲಾಯಿತು. ಸಾಹಿತಿ ಬಿ.ಎ. ಸಂಶುದ್ದೀನ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಕೊಡಗಿನ ಖ್ಯಾತ ನ್ಯಾಯವಾದಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ನೆರವೇರಿಸಿದರು. ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಲೇಖಕಿ ಸ್ಮಿತಾ ಅಮೃತರಾಜ್ ಬರೆದಿರುವ ನೆಲದಾಯಿಯ ಪರಿಮಳ ಪ್ರಬಂಧ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಬಿಡುಗಡೆಗೊಳಿಸಿದರು.
ಸಹನಾ ಕಾಂತಬೈಲು ರವರು ಬರೆದ ‘ಇದು ಬರಿ ಮಣ್ಣಲ್ಲ’ ಪ್ರಬಂಧ ಸಂಕಲನವನ್ನು ಸಾಹಿತಿ, ಕೊಡಗು ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಕುಷ್ವಂತ್ ಕೋಳಿಬೈಲು ಬಿಡುಗಡೆಗೊಳಿಸಿದರು.
ಲೇಖಕರಾದ ಡಾ. ಪ್ರಭಾಕರ ಶಿಶಿಲ, ಸ್ಮಿತಾ ಅಮೃತರಾಜ್, ಸಹನಾ ಕಾಂತಬೈಲುರವರು ಅನಿಸಿಕೆ ವ್ಯಕ್ತಪಡಿಸಿದರು. ಲೋಕನಾಥ ಅಮೆಚೂರು ಸ್ವಾಗತಿಸಿದರು. ನವೀನ್ ಕುಶಾಲಪ್ಪ ವಂದಿಸಿದರು. ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.