Breaking News

ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಿ + ಶ್ರೇಣಿ

Advt_Headding_Middle

 

ಬೆಳ್ಳಾರೆಯಲ್ಲಿನ ಡಾ.ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದ ನ್ಯಾಕ್ ಪೀರ್ ತಂಡದ ಸಮಗ್ರ ಪರಿಶೀಲನೆ ಮತ್ತು ಕಾಲೇಜಿನ ಸ್ವ-ಅಧ್ಯಯನ ವರದಿಯನ್ನು ಆಧರಿಸಿ ರಾಷ್ಟ್ರೀಯ ಮೌಲ್ಯಾಂಕನ ಸಮಿತಿ(ನ್ಯಾಕ್)ಯು, 2017 ರಿಂದ ಜಾರಿಗೆ ಬಂದಿರುವ ಪರಿಷ್ಕೃತ ಮಾನ್ಯತಾ ಚೌಕಟ್ಟಿನ ಅನ್ವಯ ಕಾಲೇಜಿಗೆ ಬಿ+ ಶ್ರೇಣಿಯನ್ನು ನೀಡಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ಭೇಟಿ ನೀಡುವ ಈ ಪರಿಶೀಲನಾ ಸಮಿತಿ, 2012-13 ರಲ್ಲಿ ನಡೆದ ನ್ಯಾಕ್ ತಂಡದ ಭೇಟಿಯ ತರುವಾಯ ಮತ್ತು ಪ್ರಸ್ತುತ ಕಾಲೇಜಿನಲ್ಲಾದ ಬದಲಾವಣೆ, ಅಭಿವೃದ್ಧಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಗುಣಮಟ್ಟವನ್ನು ಕೂಲಂಕಷವಾಗಿ ಪರಾಮರ್ಶೆ ನಡೆಸಿತ್ತು. ಈ ಹಿಂದೆ ಕಾಲೇಜಿಗೆ ಬಿ ಶ್ರೇಣಿ ಪ್ರಾಪ್ತವಾಗಿತ್ತು.

ನ್ಯಾಕ್ ತಂಡ ತನ್ನ ಭೇಟಿಯ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯೊಂದಿಗೆ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಸಮಿತಿಯ ಸದಸ್ಯರೊಂದಿಗೆ, ವಿದ್ಯಾರ್ಥಿಗಳೊಂದಿಗೆ, ಹೆತ್ತವರೊಂದಿಗೆ ಮಾತ್ರವಲ್ಲದೆ ಹಿರಿಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಮತ್ತು ಸಿಬ್ಬಂದಿ ವೃಂದದವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿತ್ತಲ್ಲದೆ ಕಾಲೇಜಿನ ಪ್ರತಿಯೊಂದು ವಸ್ತು ವಿಷಯವನ್ನೂ ಆಮೂಲಾಗ್ರವಾಗಿ ಪರಿಶೀಲನೆಗೊಳಪಡಿಸಿತ್ತು. ಕಾಲೇಜಿನ ಗ್ರಂಥಾಲಯ, ಕ್ಯಾಂಟೀನ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವ ಸೌಲಭ್ಯಗಳು ಇತ್ಯಾದಿಗಳ ಬಗೆಗೂ ಸಮಗ್ರ ಅಧ್ಯಯನ ನಡೆಸಿತ್ತು. ಅಲ್ಲದೆ ಸರಕಾರ ಮತ್ತು ಸಮುದಾಯದಿಂದ ದೊರಕುತ್ತಿರುವ ಬೆಂಬಲದ ಬಗೆಗೆ ವಿಮರ್ಶೆ ನಡೆಸಿತ್ತು.

ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡದ ಮುಖ್ಯಸ್ಥರಾಗಿ ಪಂಜಾಬ್ ಪಟಿಯಾಲ ವಿಶ್ವವಿದ್ಯಾಲಯದ ಪ್ರೊ.ಗುರುದೀಪ್ ಸಿಂಗ್ ಬಾತ್ರ, ಲಕ್ನೋ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯದ ಪ್ರೊ.ಮನೀಶ್ ಕುಮಾರ್ ವರ್ಮಾ ಮೆಂಬರ್ ಕೊ-ಆರ್ಡಿನೇಟರ್ ಆಗಿ, ಸದಸ್ಯರಾಗಿ ತಿರುಚಿರಾಪಳ್ಳಿ ಸಂತ ಜೋಸೆಫ್ ಕಾಲೇಜಿನ ಪ್ರಾಚಾರ್ಯ ಪ್ರೊ. ಆರೋಕ್ಯ ಸಾಮಿ ಝೇವಿಯರ್ ಕಾರ್ಯನಿರ್ವಹಿಸಿದ್ದರು. ಕಾಲೇಜಿನ ಈ ಸಾಧನೆಗಾಗಿ ಶ್ರಮವಹಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ರಾಘವ.ಎನ್ ಅಭಿನಂದಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.