Breaking News

ಅ. 7 ರಿಂದ ಅ. 15: ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Advt_Headding_Middle


ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಉತ್ಸವಗಳು ಅ. 7ರಿಂದ ಅ. 15ರ ತನಕ ಶ್ರೀ ಕ್ಷೇತ್ರದ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರೀಯವರ ನೇತೃತ್ವದಲ್ಲಿ ನಡೆಯಲಿದೆ. ಶ್ರೀ ತ್ರಿಶೂಲಿನೀ ಅಮ್ಮನವರ ಸನ್ನಿಧಿಯಲ್ಲಿ ಅ. 7ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ರಾಜಾಂಗಣ ಚಪ್ಪರಕ್ಕೆ ಅಳವಡಿಸಿದ ವಿದ್ಯುತ್ ದೀಪಗಳ ಲೋಕಾರ್ಪಣೆ ನಡೆಯಲಿದೆ. ಅ. 9ರಂದು ಗಣಪತಿ ಹೋಮ, ಕದಿರು ತುಂಬಿಸುವುದು, ನವಾನ್ನ, ರಾತ್ರಿ ಸಾಮೂಹಿಕ ದುರ್ಗಾಪೂಜೆ ನಡೆಯಲಿದೆ. ಅ. 10ರಂದು ಸಾಮೂಹಿಕ ಚಂಡಿಕಾಹೋಮ ಜರಗಲಿದೆ.
ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಅ. 7ರಂದು ಮಹಾಗಣಪತಿ ಹೋಮ, ನಾಂದಿ ನಡೆಯಲಿದೆ. ಅ. 15ರಂದು ವಿಜಯದಶಮಿ ಪ್ರಯುಕ್ತ ಮಧ್ಯಾಹ್ನ 11.00 ಗಂಟೆಗೆ ಅಕ್ಷರಾಭ್ಯಾಸ, ರಾತ್ರಿ 8.30ಕ್ಕೆ ಸಾಮೂಹಿಕ ರಂಗಪೂಜೆ, ದೈವಗಳಿಗೆ ತಂಬಿಲ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.