ಯಾದವ ಸಭಾ ಪ್ರಾದೇಶಿಕ ಸಮಿತಿ ಆಲೆಟ್ಟಿ ಇದರ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ

Advt_Headding_Middle

 

ಆಲೆಟ್ಟಿ ಯಾದವ ಸಭಾ ಪ್ರಾದೇಶಿಕ ಸಮಿತಿ ಇದರ ವಾರ್ಷಿಕ ಮಹಾಸಭೆಯು ಆಲೆಟ್ಟಿ ಗ್ರಾ.ಪಂ.ಸಭಾಭವನದಲ್ಲಿ ಅ.೩ರಂದು ನಡೆಯಿತು. ಕಾರ್ಯಕ್ರಮವನ್ನು ಯಾದವ ಸಭಾ ತಾ.ಸಮಿತಿ ಮಾಜಿ ಅಧ್ಯಕ್ಷ ಕೊರಗಪ್ಪ ಮಾಸ್ತರ್ ಉದ್ಘಾಟಿಸಿದರು. ಆಲೆಟ್ಟಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ೨ ವಿದ್ಯಾರ್ಥಿಗಳಿಗೆ ದಿ.ಕಣ್ಣಕ್ಕೂರು ಚೋಯಿಚ್ಚಿ ಅಮ್ಮ ರವರ ಸ್ಮರಣಾರ್ಥ ಕಣಕ್ಕೂರು ಕೊರಗಪ್ಪ ಮಾಸ್ತರ್ ರವರು ನಗದು ಪ್ರೋತ್ಸಾಹ ನೀಡಿದರು. ಹಿರಿಯ ಶಕ್ತಿ ಪೂಜಾಕರ್ಮಿಯಾದ ಅಪ್ಪಯ್ಯ ಮಣಿಯಾಣಿ ಆಲೆಟ್ಟಿಯವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ.ಉಪಾಧ್ಯಕ್ಷರಾದ ದಿನೇಶ ಕಣಕ್ಕೂರು ರವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.ಮುಂದಿನ ೩ ವರ್ಷದ ಅವಧಿಗೆ ರಾಮಚಂದ್ರ ಆಲೆಟ್ಟಿ ಅಧ್ಯಕ್ಷರಾಗಿ, ಸೀತಾರಾಮ ಕಣಕ್ಕೂರು ಕಾರ್ಯದರ್ಶಿಯಾಗಿ, ರಾಜಶೇಖರ ಕಣಕ್ಕೂರು ಕೋಶಾಧಿಕಾರಿಯಾಗಿ, ಮಹಾಲಿಂಗನ್ ಕಣಕ್ಕೂರು ಉಪಾಧ್ಯಕ್ಷರಾಗಿ, ದಿನೇಶ ಆಲೆಟ್ಟಿ ಉಪ ಕಾರ್ಯದರ್ಶಿಯಾಗಿ ಮತ್ತು ೧೧ ಜನರ ಸಮಿತಿ ರಚಿಸಲಾಯಿತು. ಸಭೆಯಲ್ಲಿ ಯಾದವ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಮ ಆಲೆಟ್ಟಿ, ತಾಲೂಕು ಅಧ್ಯಕ್ಷ ಜನಾರ್ಧನ ಕಣಕ್ಕೂರು, ಕೋಶಾಧಿಕಾರಿ ಕರುಣಾಕರ ಹಾಸ್ಪಾರೆ, ಯಾದವ ಸಭಾ ತಾಲೂಕು ಮಹಿಳಾ ಸಮಿತಿ ಮಾಜಿ ಅಧ್ಯಕ್ಷೆ ಜಯಕೃಷ್ಣ, ಕಾರ್ಯದರ್ಶಿ ರಾಜೀವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ‌ ಮಹಾಲಿಂಗನ್ ಕಣಕ್ಕೂರು ಸ್ವಾಗತಿಸಿ, ಸೀತಾರಾಮ ಕಣಕ್ಕೂರು ವಂದಿಸಿದರು. ರಾಜಶೇಖರ ಕಣಕ್ಕೂರು ಲೆಕ್ಕಪತ್ರ ಮಂಡಿಸಿದರು. ಪ್ರವೀಣ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.