ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ 5 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ

Advt_Headding_Middle

ಕಳೆದ ಜುಲೈ ತಿಂಗಳಲ್ಲಿ ನಡೆದ 2020-21ನೇ ಸಾಲಿನ ನವೋದಯ ೬ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ತರಗತಿಗಳನ್ನು ಪಡೆದ 5 ಮಂದಿ ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಮುಪ್ಪೇರ್ಯ ಗ್ರಾಮದ ಬದಿವನ ತಾರನಾಥ ಬಿ.ಸಿ ಮತ್ತು ರೂಪ ಬಿ.ಟಿ ದಂಪತಿಯ ಪುತ್ರ ಕೀರ್ತನ್ ಬಿ.ಟಿ, ಕಳಂಜ ಗ್ರಾಮದ ಪಂಜಿಗಾರು ಜಯಪ್ರಕಾಶ್ ಪಿ ಮತ್ತು ಪವಿತ್ರ ಎಂ.ಜಿ ದಂಪತಿಯ ಪುತ್ರ ಸರ್ವದ್ ಪಿ.ಜೆ, ಬೆಳ್ಳಾರೆ ಗ್ರಾಮದ ತಡಗಜೆ ವಿಜಯ ಕುಮಾರ್ ಮತ್ತು ದಿವ್ಯಜ್ಯೋತಿ ದಂಪತಿಯ ಪುತ್ರಿ ಅಂಜನಾ ವಿ, ಕಾಣಿಯೂರು ಗ್ರಾಮದ ಕಂಡೂರು ಲೋಕೇಶ್ ಕೆ. ಮತ್ತು ಪ್ರಮೀಳ ಪಿ ದಂಪತಿಯ ಪುತ್ರ ಉದ್ಭವ್ ಗೌಡ ಕೆ.ಎಲ್, ಕುತ್ಕುಂಜ ಗ್ರಾಮದ ಚಿದ್ಗಲ್ ಸೀತಾರಾಮ ಮತ್ತು ಮಮತಾ ಕೆ ದಂಪತಿಯ ಪುತ್ರ ಭವಿಶ್ ಸಿ ನವೋದಯ ಪ್ರವೇಶಕ್ಕೆ ಆರ್ಹತೆಯನ್ನು ಪಡೆದುಕೊಂಡಿದ್ದಾರೆ. ಜ್ಞಾನದೀಪ ಸಂಸ್ಥೆಯು ಕಳೆದ ೧೩ ವರ್ಷಗಳಿಂದ ನವೋದಯ ಪ್ರವೇಶ ಪರೀಕ್ಷೆಯ ತರಗತಿಗಳನ್ನು ನಡೆಸುತ್ತಿದ್ದು, ಪ್ರಸಕ್ತ ವರ್ಷದವರೆಗೆ ಒಟ್ಟು ೧೩೩ ವಿದ್ಯಾರ್ಥಿಗಳು ಸಂಸ್ಥೆಯಿಂದ ತರಗತಿಗಳನ್ನು ಪಡೆದು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ೨೦೨೧-೨೨ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಗೆ ಸಿದ್ಧತಾ ತರಗತಿಗಳು ಆರಂಭಗೊಂಡಿದ್ದು, ಪ್ರಸಕ್ತ ವರ್ಷದಿಂದ ಸುಳ್ಯ, ಸುಬ್ರಹ್ಮಣ್ಯ ಹಾಗು ಉಪ್ಪಿನಂಗಡಿಯಲ್ಲಿ ತರಗತಿಗಳು ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.