ಕೇವಳ : ಮರದ ಗೆಲ್ಲು ಕಡಿಯುತ್ತಿದ್ದಾಗ ಬಳ್ಳಿ ಸಿಲುಕಿ ಮೃತ್ಯು

Advt_Headding_Middle

 

 

ಮಡಪ್ಪಾಡಿ ಗ್ರಾಮದ ಕೇವಳ ಎಂಬಲ್ಲಿ ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲಿಯೇ ಬಳ್ಳಿಯೊಂದು ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ವರದಿಯಾಗಿದೆ.
ಕೇವಳ ಸಣ್ಣಯ ಗೌಡ ಎಂಬವರ ಪುತ್ರ ಹೂವಪ್ಪ ಗೌಡ  ಮೃತಪಟ್ಟ ವ್ಯಕ್ತಿ.
ಹೂವಪ್ಪ ಗೌಡರವರು ಮಧ್ಯಾಹ್ನ ಒಂದೂವರೆ ಗಂಟೆಯ ಸಮಯದಲ್ಲಿ ತನ್ನ ಮನೆಯ ಎದುರಿಗಿದ್ದ ಸಣ್ಣ ಗಾತ್ರದ ಮರದ ಗೆಲ್ಲು ಕಡಿಯಲು ಹತ್ತಿದ್ದರು. ಗೆಲ್ಲು ಬೀಳುವ ಸಂದರ್ಭ ಬೀನೆ ಬಳ್ಳಿಗೆ ಸಿಲುಕಿದರೆನ್ನಲಾಗಿದೆ‌. ತಕ್ಷಣ ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರು ಅವರನ್ನು ಕೆಳಗಿಳಿಸಿ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದರು. ಅದಾಗಲೇ ಅವರು ಮೃತಪಟ್ಟಿದ್ದರೆಂದು ತಿಳಿದು ಬಂದಿದೆ. ಮೃತರು ಪತ್ನಿ, ಮಕ್ಕಳು, ಸಹೋದರರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.