ಸುಳ್ಯದ ಗುರುಂಪುವಿನಲ್ಲಿ ನೀರು ಪೋಲಾಗುತ್ತಿದೆ : ಕ್ರಮಕ್ಕೆ ಒತ್ತಾಯಿಸಿ ಎಸ್.ಡಿ.ಪಿ.ಐ. ಪ್ರತಿಭಟನೆ

Advt_Headding_Middle

 

ಸಮಸ್ಯೆ ಪರಿಹಾರವಾಗದಿದ್ದರೆ ನ.ಪಂ.ಗೆ ಮುತ್ತಿಗೆಯ ಎಚ್ಚರಿಕೆ

 

ಸುಳ್ಯದ ಕಲ್ಲುಮುಟ್ಲು ವಾರ್ಡ್ ಗೊಳಪಡುವ ಗುರುಂಪು ಎಂಬಲ್ಲಿ ನ.ಪಂ. ಕುಡಿಯುವ ನೀರಿನ ಪೈಪ್ ಒಡೆದು 8 ತಿಂಗಳಿನಿಂದ ಒಡೆದು ನೀರು ಪೋಲಾಗುತ್ತಿದ್ದರೂ ನ.ಪಂ. ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ ಎಂದು ಆಗ್ರಹಿಸಿ ಎಸ್.ಡಿ.ಪಿ.ಐ. ಇಂದು ಪ್ರತಿಭಟನೆ ನಡೆಸಿತು.


ಎಸ್.ಡಿ.ಪಿ.ಐ. ನಗರ ಅಧ್ಯಕ್ಷ ಅತ್ತಾವುಲ್ಲ ಮಾತನಾಡಿ ಇಲ್ಲಿನ ನೀರಿನ ಸಮಸ್ಯೆಯ ಕುರಿತು ನ.ಪಂ. ಗೆ ಮನವಿ ನೀಡಿದಾಗ ಪರಿಹರಿಸಲು ನ.ಪಂ. ಗೆ ಆಗುವುದಿಲ್ಲವಾದರೆ ಅವರು ಮತ್ತೇನು ಕೆಲಸ ಮಾಡುತ್ತಿದ್ದಾರೆ. ಗುರುಂಪು ನೀರು ಸಮಸ್ಯೆ ಪರಿಹಾರವಾಗದಿದ್ದರೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ಎಸ್.ಡಿಪಿಐ ವಿಧಾನಸಭಾ ಕ್ಷೇತ್ರ ಮಾಜಿ ಅಧ್ಯಕ್ಷ ರಫೀಕ್ ಎಂ.ಎ. ಮಾತನಾಡಿ ನಾವು ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆ ಹರಿಸುವುದಿಲ್ಲ. ನ.ಪಂ. ಆಡಳಿತ ಹಾಗೂ ಅಧಿಕಾರಿಗಳು ನಿಷ್ಕ್ರಿಯ ರಾಗಿದ್ದಾರೆ. ನೀವೆಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಒಳ್ಳೆಯದು, ವಾರದೊಳಗೆ ಸಮಸ್ಯೆ ಇತ್ಯರ್ಥ ವಾಗದಿದ್ದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು

ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಬಾಬು ಸವಣೂರು ಮಾತನಾಡಿ ಸಮಸ್ಯೆ ಪರಿಹಾರವಾಗದಿದ್ದರೆ ಮುಂದಿನ ದಿನದಲ್ಲಿ ನ.ಪಂ. ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಫೈಝಲ್ ಬೆಳ್ಳಾರೆ ಮಾತನಾಡಿ “ನೀರು ಪೋಲಾಗುವುದರ ಬಗ್ಗೆ ನ.ಪಂ. ಗೆ ತಿಳಿಸಿದರೆ ಅವರು ಕ್ರಮ ಕೈಗೊಳ್ಳದೆ ಮನೆಯಲ್ಲೆ ಕುಳಿತಿದ್ದಾರೆ. ನಿಮಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಿ ಎಂದು ಹೇಳಿದರು.

ಎಸ್.ಡಿ.ಪಿ.ಐ. ಪ್ರಮುಖರಾದ ಆಬಿದ್ ಪೈಚಾರ್, ಮಿರಾಜ್ ಸುಳ್ಯ, ಮುಸ್ತಫ ಕಳ್ಳಪಳ್ಳಿ, ಸಿದ್ದೀಕ್ ಕೋಡಿಯಮ್ಮೆ, ಉವೈಸ್ ಕಲ್ಲುಗುಂಡಿ, ರಜಾಕ್ ಪೈಚಾರ್, ಸಿದ್ದೀಕ್ ಸಿ.ಎ. ಕರೀಂ ಬಿ.ಎಸ್. ಹಾಗೂ ಕಾರ್ಯಕರ್ತರು ಇದ್ದರು.

ನ.ಪಂ. ಅಧಿಕಾರಿಗಳು ಪ್ರತಿಭಟನಾಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಪ್ರತಿಭಟನಾ ಕಾರರು ರಸ್ತೆಯಲ್ಲಿ ಕುಳಿತಾಗ ಎಸ್.ಐ. ಯವರು ಬಂದು ಅವರನ್ನು ಎಬ್ಬಿಸಿದರು. ಆದರೆ ಪ್ರತಿಭಟನಾಕಾರರು ಪಟ್ಟು ಬಿಡದೆ ಅಧಿಕಾರಿಗಳು ಬರಬೇಕೆಂದು ಒತ್ತಾಯಿಸಿದರು. ಕೆಲ ಸಮಯದ ಬಳಿಕ ಸ್ಥಳಕ್ಕೆ ಬಂದ ಆರೋಗ್ಯ ನಿರೀಕ್ಷಕ ಲಿಂಗರಾಜರು ನಿಮ್ಮ ಮನವಿಯನ್ನು ಅಧ್ಯಕ್ಷರಿಗೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿ ಮನವಿ ಸ್ವೀಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.