Breaking News

ನೇಮೋತ್ಸವದ ಲೆಕ್ಕಾಚಾರ ಆಡಳಿತ ಸಮಿತಿಗೆ ಹಸ್ತಾಂತರವಾಗಿದೆ : ಅಪಪ್ರಚಾರದಿಂದ ಬೇಸರವಾಗಿದೆ

Advt_Headding_Middle

 

ಜಯನಗರ – ಕೊರಂಬಡ್ಕ ನಾಗಬ್ರಹ್ಮ ಆದಿಮೊಗೇರ್ಕಳ ದೇವಸ್ಥಾನ ನೇಮೋತ್ಸವ ಸಮಿತಿ ಸ್ಪಷ್ಟನೆ

ಕಳೆದ ಬಾರಿ ಜಯನಗರ ನಾಗಬ್ರಹ್ಮ ಆದಿಮೊಗೇರ್ಕಳ ದೇವಸ್ಥಾನದಲ್ಲಿ ನಡೆದ ನೇಮೋತ್ಸವ ಕ್ಕೆ ಸಂಗ್ರಹವಾದ ಹಣದ ಲೆಕ್ಕಾಚಾರವನ್ನು ಆಡಳಿತ ಸಮಿತಿಯವರಿಗೆ ನೇಮೋತ್ಸವ ಸಮಿತಿ ಹಸ್ತಾಂತರ ಮಾಡಿಯಾಗಿದೆ. ಈಗ ಕೆಲವರು ನೇಮೋತ್ಸವ ಸಮಿತಿ ಮೇಲೆ ದುರುಪಯೋಗ ದ ಆರೋಪ ಮಾಡುತ್ತಿದ್ದು ಇದು ಸರಿಯಲ್ಲ ಎಂದು ನೇಮೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಕುಮಾರ್ ಜಯನಗರ ಹೇಳಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಳೆದ ಬಾರಿ ನೇಮೋತ್ಸವ ಕ್ಕೆ 2 ಲಕ್ಷದ 80 ಸಾವಿರ ಸಂಗ್ರಹವಾಗಿತ್ತು. ಅದರಲ್ಲಿ ನೇಮೋತ್ಸವ ಖರ್ಚು, ಮೇಲ್ಚಾವಣಿ ದುರಸ್ತಿ, ಸಾರ್ವಜನಿಕ ಶೌಚಾಲಯ ಅಡಿಪಾಯ ಸೇರಿ ಖರ್ಚು ಹೋಗಿ ಈಗ ರೂ.52 ಸಾವಿರ ಉಳಿಕೆಯಾಗಿದ್ದು, ಇದರ ಲೆಕ್ಕಾಚಾರವನ್ನು ನಾವು ಆಡಳಿತ ಸಮಿತಿಗೆ ಹಸ್ತಾಂತರ ಮಾಡಿದ್ದೇವೆ. ಆದರೆ ಹಣ ಮಾತ್ರ ಬ್ಯಾಂಕಿನ ಮೂಲಕವೇ ವರ್ಗಾಯಿಸಬೇಕೆಂಬ ಕಾರಣಕ್ಕೆ ನಮ್ಮಲ್ಲಿ ಇದೆ. ಆಡಳಿತ ಸಮಿತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದರು.

ನೇಮೋತ್ಸವ ಸಮಿತಿಗೆ ಎಲ್ಲರೂ ಸಹಕಾರ ನೀಡಿದರಿಂದ ಒಳ್ಳೆಯ ರೀತಿಯ ಲ್ಲಿ ನೇಮೋತ್ಸವ ಆಗಿದೆ. ಎಲ್ಲದಕ್ಕೂ ಲೆಕ್ಕಾಚಾರ ಇದ್ದರೂ ಕೆಲವರು ನೇಮೋತ್ಸವ ಸಮಿತಿಯ ಮೇಲೆ ದುರುಪಯೋಗ ದ ಆರೋಪ ಮಾಡುವುದರಿಂದ ಬೇಸರ ತರಿಸಿದೆ. ದೇವಸ್ಥಾನ ಕ್ಕೆ ಬರುವ ಭಕ್ತರಿಗೆ ಗೊಂದಲ ಆಗಬಾರದೆಂಬ ಕಾರಣಕ್ಕೆ ಇಲ್ಲಿ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ಹೇಳಿದ ಅವರು, ಅಲ್ಲಿ ಎರಡು ಆಡಳಿತ ಸಮಿತಿ ಆಗಿರುವುದರಿಂದ ಹೀಗೆಲ್ಲ ಆಗುತ್ತಿರಬಹುದು. ಆದರೆ ಯಾರೂ ಯಾವಾಗ ಬೇಕಾದರೂ ಲೆಕ್ಕವನ್ನು ಕೇಳಿದರೆ ಅದಕ್ಕೆ ನಾವು ವಿವರಣೆ ನೀಡುತ್ತೇವೆ. ಅಪಪ್ರಚಾರ ಮಾಡಬೇಡಿ ಎಂದು ಅವರು ವಿನಂತಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಕೃಷ್ಣಮೂರ್ತಿ, ಸದಸ್ಯರಾದ ರಮೇಶ್ ಪೂಜಾರಿ, ದೀಕ್ಷಿತ್ ಜಯನಗರ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.