Breaking News

ಸಂಪಾಜೆ : ರಕ್ತದಾನ ಶಿಬಿರ

Advt_Headding_Middle

 

ಸಂಪಾಜೆ ಗ್ರಾಮ ಪಂಚಾಯತ್ ಕಲ್ಲುಗುಂಡಿ ಹಾಗೂ ಸಜ್ಜನ ಪ್ರತಿಷ್ಠಾನ ಗೂನಡ್ಕ ಇದರ ಜಂಟಿ ಆಶ್ರಯದಲ್ಲಿ ವಿ ಆರ್ ಒನ್ ವಾಟ್ಸಪ್ ಗ್ರೂಪ್ ಗೂನಡ್ಕ ಇದರ ಸಹಕಾರದೊಂದಿಗೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ , ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ. ಇದರ ೮ನೇ ರಕ್ತದಾನ ಶಿಬಿರವು ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣ ಕಲ್ಲುಗುಂಡಿಯಲ್ಲಿ ಅ. ೩ರಂದು ನಡೆಯಿತು. ಕರೀಮ್ ಕೆದ್ಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಶಿಬಿರದಲ್ಲಿ ೫೦ ಶಿಬಿರಾರ್ಥಿಗಳು ರಕ್ತದಾನ ಮಾಡಿ ಜೀವದಾನಿಗಳಾದರು. ಈ ರಕ್ತದಾನ ಶಿಬಿರದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ. ಹಮೀದ್, ತೆಕ್ಕಿಲ್ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷರಾದ ಟಿ.ಯಂ.ಶಹೀದ್, ಗ್ರಾಮ ಪಂಚಾಯತ್ ಸದಸ್ಯ ಸವಾದ್ ಅಬೂಸಾಲಿ , ಹನೀಫ್ ,ಸುಮತಿ ಹಾಗೂ ವಿಮಲಾ ಪ್ರಸಾದ್ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ , ಕಲ್ಲುಗುಂಡಿ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ಬಾಸ್ ಸಂಟ್ಯಾರ್ , ಪಿ.ಎ. ಉಮ್ಮರ್ ಹಾಜಿ ಗೂನಡ್ಕ ಹಾಗೂ ಸಜ್ಜನ ಪ್ರತಿಷ್ಠಾನ ಇದರ ಕಾರ್ಯದರ್ಶಿ ರಹೀಂ ಬೀಜದಕಟ್ಟೆ, ಸಲಿಂ ಪೆರುಂಗೋಡಿ, ಎಸ್.ಎ. ರಿಯಾಜ್,ಅಝರ್,ಅಶ್ರಫ್ ಕೆ.ಎಸ್., ಹಾರಿಸ್ ಝಮ್ ಝಮ್ ,ಪ್ರವೀಣ್, ನವೀನ್ ,ಜಾಬೀರ್, ಬಿ ಸಿ ಯಂ ಅಬ್ದುಲ್ಲಾ ದರ್ಖಾಸ್, ಮತ್ತು ಉನೈಸ್ ಹಾಗೂ ಈ ರಕ್ತದಾನ ಶಿಬಿರದ ಪ್ರಮುಖ ರುವಾರಿ ಎಸ್‌ಎಸ್‌ಎಫ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ,ಹಾಗೂ ವಿ ಆರ್ ಒನ್ ವಾಟ್ಸಪ್ ಗ್ರೂಪ್‌ನ ಅಧ್ಯಕ್ಷ/ ಸರ್ವ ಸದಸ್ಯರು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರೂ ಗ್ರಾಮ ಪಂಚಾಯತ್ ಸಂಪಾಜೆ , ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ , ಕೋ ಅರ್ಡಿನೇಟರ್ ಪ್ರವೀಣ್ ಕುಮಾರ್ ,ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಸಂಘಟಕರಿಗೆ ಹಾಗೂ ಸಿಬ್ಬಂದಿಗಳಿಗೆ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನ ಊಟವನ್ನು ಸಜ್ಜನ ಪ್ರತಿಷ್ಠಾನದ ವತಿಯಿಂದ ನೀಡಿ ಸಹಕರಿಸಲಾಯಿತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.