Breaking News

ಸುಬ್ರಹ್ಮಣ್ಯ -ಪಂಜ ವಲಯ ಬಂಟರ ಸಂಘದ ಪದಗ್ರಹಣ, ಸನ್ಮಾನ

Advt_Headding_Middle

 

ಸುಬ್ರಹ್ಮಣ್ಯ-ಪಂಜ ವಲಯ ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾನ್ವಿತರಿಗೆ ಸನ್ಮಾನ ಕಾರ್ಯಕ್ರಮ ಅ. 3ರಂದು ಶಾರದಾ ಗಾರ್ಡನ್ ಕೇನ್ಯ (ಚಾಲ್ಯಾರ್)ದಲ್ಲಿ ನಡೆಯಿತು.
ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಗೌರವಾಧ್ಯಕ್ಷ ರವೀಂದ್ರನಾಥ ಶೆಟ್ಟಿ ಕೇನ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ತಾ.ಪಂ. ಸದಸ್ಯೆ ಶ್ರೀಮತಿ ಶುಭದಾ ಎಸ್. ರೈ, ಸುದರ್ಶನ್ ಶೆಟ್ಟಿ ಕೇನ್ಯ ಭಾಗವಹಿಸಿದ್ದರು. ವೇದಿಕೆಯಲ್ಲಿ ವಲಯ ಬಂಟರ ಸಂಘದ ಅಧ್ಯಕ್ಷರಾದ ಮೋಹನ್ ದಾಸ್ ರೈ ಸುಬ್ರಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿಮಲಾ ರಂಗಯ್ಯ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ
ಪದ್ಮನಾಭ ರೈ ಆಗೋಲಿಬೈಲು ಗುತ್ತು, ಕಾರ್ಯದರ್ಶಿಯಾಗಿ ಪ್ರೇಮನಾಥ್ ಶೆಟ್ಟಿ ಪಲ್ಲೋಡಿ.
ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ತಾರಾ ಬಾಲಕೃಷ್ಣ ರೈ ಬಿರ್ಕಿ,
ಉಪಾಧ್ಯಕ್ಷೆಯಾಗಿ ಶ್ರೀಮತಿ ಕುಸುಮ ಎಸ್ ರೈ ಕೇನ್ಯ ಹೊಸಮನೆ,
ಯುವಘಟಕದ ಅಧ್ಯಕ್ಷರಾಗಿ ಕಾರ್ತಿಕ್ ರೈ ಬಳ್ಪ, ಕಾರ್ಯದರ್ಶಿಯಾಗಿ ಸುದೀಪ್ ರೈ ಬರಮೇಲು, ಯುವ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ಶ್ರದ್ಧಾ ಎಲ್ ರೈ ಶಾರದಾ ಗಾರ್ಡನ್ ಕೇನ್ಯ, ಕಾರ್ಯದರ್ಶಿಯಾಗಿ ರಿಶಿತ ಆರ್ ರೈ ಹೊಸಗುತ್ತು ಅಡ್ಡಬೈಲ್ ಆಯ್ಕೆಯಾಗಿ ಪದಗ್ರಹಣ ಮಾಡಿದರು. ಪಿ.ಯು.ಸಿ. ವಿಭಾಗದಲ್ಲಿ
90% ಕ್ಕಿಂತ ಅಧಿಕ ಅಂಕ ಪಡೆದ ಪ್ರಜ್ವಲ್ ಜಿ ರೈ ಪಲ್ಲೋಡಿ,
ಮಿಥುನ್ ರೈ ಪಂಜ, ರಿಶಿತ ಆರ್ ರೈ ಅಡ್ಡಬೈಲ್ ಎಸ್.ಎಸ್.ಎಲ್.ಸಿ.ಯಲ್ಲಿ ಅನಿಕಾ ಜಗದೀಶ್ ಶೆಟ್ಟಿ ಕೇನ್ಯ ಹೊಸಮನೆ, ಇಶಾನ್ ಅಡ್ಯಂತಾಯ ಕೇನ್ಯ ಹೊಸಮನೆ, ಪ್ರತೀಕ್ಷಾ ಜಿ ರೈ ಪಲ್ಲೋಡಿ, ಖುಷಿ ಎಸ್ ರೈ ಗೆಜ್ಜೆ ಯವರನ್ನು ಸನ್ಮಾನಿಸಲಾಯಿತು.
ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪುಣ್ಯ ಬಿ ರೈ ಚಾಲ್ಯಾರ್, ಪ್ರಣಮ್ ಬಿ ರೈ ಚಾಲ್ಯಾರ್, ಖುಷಿ ಎಸ್ ರೈ, ಗೌಶಿ ಎಸ್ ರೈ, ಹರ್ಷಿತಾ ರೈ, ದೀಕ್ಷಿತಾ ರೈ, ಕಾರ್ತಿಕ್ ರೈ, ಅನೋಜ್ ರೈ, ಅಶ್ವಿನಿ, ಅಶಿತಾರಿಗೆ ನೋಟ್ ಬುಕ್ ವಿತರಿಸಲಾಯಿತು.
ಪದ್ಮನಾಭ ರೈ ಆಗೋಲಿಬೈಲು ಗುತ್ತುರವರನ್ನು ಧಾರ್ಮಿಕ ಕ್ಷೇತ್ರದಲ್ಲಿನ ಸೇವೆಗಾಗಿ
ಶ್ರೀಮತಿ ಕುಸುಮ ಎಸ್ ರೈ ಕೇನ್ಯ ಹೊಸಮನೆಯವರನ್ನು ಸಮಾಜ ಸೇವೆಗಾಗಿ ಬಾಲಕೃಷ್ಣ ರೈ ಬಿರ್ಕಿಯವರನ್ನು ರಾಷ್ಟ್ರೀಯ ಕ್ರೀಡಾಪಟು ನೆಲೆಯಲ್ಲಿ ಗೌರವಿಸಲಾಯಿತು.
ಶ್ರೀಮತಿ ಸಂದ್ಯಾ ಪ್ರಸಾದ್ ರೈ ಪ್ರಾರ್ಥಿಸಿದರು. ವಿಶ್ವನಾಥ ರೈ ಅರ್ಗುಡಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತಾಡಿದರು. ಪ್ರಶಾಂತ್ ರೈ ಪಲ್ಲೋಡಿ ವಂದಿಸಿದರು. ದೇವಿಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.