ಮಡಪ್ಪಾಡಿ : ಭಾರಿ ಮಳೆಗೆ ಕೊಚ್ಚಿ ಹೋದ ಕೃಷಿ

Advt_Headding_Middle

 

 

ಮಡಪ್ಪಾಡಿಯ ಅಂಬೆಕಲ್ಲು ಎಂಬಲ್ಲಿ ಇಂದು ಸುರಿದ ಭಾರೀ ಮಳೆಗೆ ಕೃಷಿ ಕೊಚ್ಚಿ ಹೋಗಿದೆ.

ಮಡಪ್ಪಾಡಿಯ ಯಶೋಧರ ಅಂಬೆಕಲ್ಲು ಎಂಬವರ ಮನೆಯ ಮುಂಭಾಗ ಪ್ರಕೃತಿ ವಿಕೋಪಗೊಂಡ ಸಂದರ್ಭದಲ್ಲಿ ಮಣ್ಣು ಕುಸಿದು ತೋಟದ ಬದಿಯ ತೋಡು ಮುಚ್ಚಿ ತೋಡಿನ ನೀರು ತೋಟಕ್ಕೆ ನುಗ್ಗಿ ಹಾನಿಯಾಗಿತ್ತು. ಅವರ ಮನೆಯೂ ಅಪಾಯದ ಸ್ಥಿತಿಯಲ್ಲಿತ್ತು. ಈಗ ಯಶೋಧರವರು ಹೊಸ ಮನೆಯನ್ನು ಕಟ್ಟಿದ್ದಾರೆ. ತೋಟದಲ್ಲಿ ಹರಿಯುತ್ತಿದ್ದ ನೀರನ್ನು ತೋಡಿನಲ್ಲಿ ಹರಿಯುವಂತೆ ಮಾಡಿದ್ದರು. ಹಾಳಾದ ಕೃಷಿಯ ಬದಲಿಗೆ ಬೇರೆ ಕೈಷಿಯನ್ನು ಮಾಡಿದ್ದರು. ಆದರೆ ಇಂದು ಮಧ್ಯಾಹ್ನ ಸುರಿದ ಭಾರೀ ಮಳೆಗೆ ಪ್ರವಾಹದಂತಹ ನೀರು ತೋಡಿನಲ್ಲಿ ಬಂದು ಯಶೋಧರವರ ತೋಟಕ್ಕೆ ನುಗ್ಗಿ ಮಾಡಿದ ಕೃಷಿಯೂ ಕೊಚ್ಚಿ ಹೋಗಿದೆ. ಇದರಿಂದ ಸಾವಿರಾರು ರೂಪಾಯಿಗಳು ನಷ್ಟ ಸಂಭವಿಸಿದೆ.

ನಮಗೆ ಪ್ರಕೃತಿ ವಿಕೋಪದಡಿ ಆದ ಹಾನಿಗೆ ಇನ್ನೂ ಕೂಡಾ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಕುಸಿತಗೊಂಡು ಕೃಷಿ ನಾಶ ವಾಗಿದೆ. ತುಂಬಾ ನಷ್ಟ ಸಂಭವಿಸಿದೆ. ನಾವು ನಮ್ಮ ಜನಪ್ರತಿನಿಧಿಗಳಿಗೆ ಹೇಳಿದರೂ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಯಶೋಧರವರ ಪತ್ನಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.