Breaking News

ದಿಗಂತ್ ವಿ.ಎಸ್. ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆ

Advt_Headding_Middle

 

 

ಬೆಂಗಳೂರು ಬಸವನಗುಡಿ ಈಜು ಕೊಳದಲ್ಲಿ ಸೆ.23 ರಿಂದ 28ರ ತನಕ ಜರುಗಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ದಿಗಂತ್ ವಿ ಎಸ್(13ವರುಷ) ರವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 200 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಮತ್ತು 100 ಮೀಟರ್ ಬ್ಯಾಕ್ ಸ್ಟ್ರೋಕ್ ಕಂಚಿನ ಪದಕ ಪಡೆದು, ಇದೇ ತಿಂಗಳು ಜರಗುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರು ಬೆಥನಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ. ಈಗ ಮಂಗಳೂರಿನ ಸೈಂಟ್ ಅಲೋಸಿಯಸ್ ಹೈಸ್ಕೂಲ್ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ತೂರಿನ ಬಾಲವನದಲ್ಲಿರುವ ಪುತ್ತೂರು ಆಕ್ಟಿಟಿಕ್ ಕ್ಲಬ್ ನ ಈಜು ಕೊಳದಲ್ಲಿ ಈಜು ಅಭ್ಯಾಸ ಆರಂಭಿಸಿ, ಕ್ಲಬ್ ನ ತರಬೇತುದಾರ ಪಾರ್ಥ ವಾರಣಾಸಿ, ನಿರೂಪ್ ಜಿ ಆರ್ ಮೊದಲಾದವರು ಉತ್ತಮ ತರಬೇತಿ ನೀಡಿರುತ್ತಾರೆ. ಈಗ ಮಂಗಳೂರಿನ ಸೈಂಟ್ ಅಲೋಸಿಯಸ್ ಕ್ಯಾಂಪಸ್ ವಿ ವನ್ ಅಕ್ವೆಟಿಕ್ ಈಜುಕೊಳದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಡಾಲ್ ಫಿನ್ ಅಕ್ವೆಟಿಕ್ ಕ್ಲಬ್ ನ ಪ್ರಾಯೋಜಕತ್ವದಲ್ಲಿ ಹಿರಿಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ಯಜ್ಞೇಶ್ ರವರು ಪರಿಣಾಮಕಾರಿ ತರಬೇತಿ ನೀಡುತ್ತಿದ್ದಾರೆ. ವಿ ವನ್ ಅಕೋ ಸೆಂಟರ್ ವ್ಯಸ್ಥಾಪಕರಾದ ನವೀನ್ ಕುಮಾರ್ ಮತ್ತು ಶ್ರೀಮತಿ ರೂಪ ಸಾಥ್ ನೀಡುತ್ತಿದ್ದಾರೆ. ದಿಗಂತ್ ವಿ ಎಸ್.ಎಸ್.ಸಿ .ಡಿ.ಸಿ.ಸಿ ಬ್ಯಾಂಕ್ ಸವಣೂರು ಶಾಖಾ ವ್ಯವಸ್ಥಾಪಕ ವಿಶ್ವನಾಥ ಎಸ್ ಮತ್ತು ಕ್ಯಾಂಪ್ಕೋ ಮಂಗಳೂರು ಉದ್ಯೋಗಿ ಶ್ರೀಮತಿ ವೀಣಾ ಕುಮಾರಿ ಅವರ ಪುತ್ರ. ಮೂಲತಃ ಇವರು ಪಂಬೆತ್ತಾಡಿ ಗ್ರಾಮದ ಶೆಟ್ಟಿಗದ್ದೆ ಯವರು. ಪ್ರಸ್ತುತ ಪುತ್ತೂರು ಕೂರ್ನಡ್ಕದಲ್ಲಿ ‌ ವಾಸವಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.