Breaking News

ಸುಳ್ಯದಲ್ಲಿ ರಾಜಕೀಯ ಬದಲಾವಣೆ ತನ್ನಿ ಅಭಿವೃದ್ಧಿಯ ಸಾಕ್ಷಿಗುಡ್ಡೆ ನಿರ್ಮಿಸುವೆ ಸುಳ್ಯದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿ. ಭರವಸೆ

Advt_Headding_Middle

 

 

ರಾಜಕೀಯವಾಗಿ ಸುಳ್ಯದಲ್ಲಿ ಬದಲಾವಣೆ ತಂದು ಕೊಡಿ. ಇಲ್ಲಿ ಅಭಿವೃದ್ಧಿಯ ಸಾಕ್ಷಿಗುಡ್ಡೆ ನಿರ್ಮಿಸುತ್ತೇವೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಇಂದು ಸುಳ್ಯದ ನ್ಯಾಯಾಲಯಕ್ಕೆ ಕೇಸೋಂದರ ಸಾಕ್ಷಿ ನುಡಿಯಲು ಬಂದ ಅವರು ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದರು.
ಸುಳ್ಯದ ಮೇಲೆ ನನಗೆ ವಿಶೇಷ ಕಣ್ಣಿದೆ. ಕನಕಪುರ ಒಂದು ಕಣ್ಣಾದರೆ – ಸುಳ್ಯ ಮತ್ತೊಂದು ಕಣ್ಣು. ಇಲ್ಲಿ ಪರಿವರ್ತನೆ ಮಾಡುವ ಆಸೆ ಇದೆ. ಅದಕ್ಕಾಗಿ ರಾಜಕೀಯದ ಬದಲಾವಣೆ ಆಗಬೇಕಿದೆ. ಬೇರೆಯವರಿಗೆ ಅವಕಾಶ ಕೊಟ್ಟಿರುವುದಕ್ಕೆ ನಮ್ಮ ತಕರಾರಿಲ್ಲ. ಮುಂದೆ ನಮಗೂ ಒಂದು ಅವಕಾಶ ಮಾಡಿ ಕೊಡಿ. ಸುಳ್ಯದ ಇತಿಹಾಸವನ್ನೆ ಬದಲಿಸುತ್ತೇವೆ. ಇಲ್ಲಿ ನಾನು ರಾಜಕಾರಣ ಹೆಚ್ಚು ಮಾತನಾಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಟ್ಟಾದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ನಾನು ಪವರ್ ಮಂತ್ರಿಯಾಗಿದ್ದಾಗ ಏನು ಮಾಡಿzನೆಂದು ಈಗ ಬಿಜೆಪಿಯ ಕೇಂದ್ರ – ರಾಜ್ಯ ಸರಕಾರವೇ ಗುಣಗಾನ ಮಾಡುತ್ತಿದೆ. ಪ್ರತೀ ತಾಲೂಕಲ್ಲಿ ೨೦- ೨೦ ಮೆಗವ್ಯಾಟ್ ಸೋಲಾರ್ ಸೇರಿದಂತೆ ರಾಜ್ಯದ ಇಲಾಖೆಯಲ್ಲಿ ಬದಲಾವಣೆ ತರಲಾಗಿದೆ. ಹೆಚ್ಚುವರಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಿದೆ. ಈಗ ಉಡುಪಿಯಿಂದ ಆಯ್ಕೆಯಾದವರು ಇಂಧನ ಮಂತ್ರಿ ಆಗಿದ್ದಾರೆ. ಅವರು ನಾವಾಕಿದ ಅಡಿಪಾಯದಡಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹೊಸತಾಗಿ ಏನನ್ನೂ ಮಾಡಿಲ್ಲ ಎಂದು ಮಾಜಿ ಇಂಧನ ಸಚಿವರು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ಸ್ವಾಗತಿಸಿದರು. ಹಿರಿಯ ವಕೀಲ ನಳಿನ್ ಕುಮಾರ್ ಕೋಡ್ತುಗುಳಿ ವೇದಿಕೆಯಲ್ಲಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.