ಊರಿನವರ ಪ್ರೀತಿ, ಕುಟುಂಬದ ಬೆಂಬಲ, ಹಿರಿಯರ ಹಾರೈಕೆ, ದೇವರ ಆಶೀರ್ವಾದ ದಿಂದ ಈ ಮಟ್ಟಕ್ಕೆ ಬಂದಿದ್ದೇನೆ

Advt_Headding_Middle

 

ಆತ್ಮವಿಶ್ವಾಸದ ಪ್ರಯತ್ನ ಗುರಿ ಮುಟ್ಟಿಸುತ್ತದೆ : ಜಿಲ್ಲಾ ಸತ್ರ ನ್ಯಾಯಧೀಶೆ ಜ್ಯೋತ್ಸ್ನಾ ದೋಳ

ಮೂಲ ಶಿಕ್ಷಣ ಉತ್ತಮ ಜೀವನವನ್ನು ರೂಪಿಸಬಲ್ಲುದು. ನಾವು ತೆಗೆದುಕೊಳ್ಳುವ ನಿರ್ಧಾರದ ಹಿಂದೆ ಶಿಕ್ಷಕರ ಶ್ರಮವಿದೆ. ಊರಿನವರ ಪ್ರೀತಿ, ಕುಟುಂಬದ ಬೆಂಬಲ, ಹಿರಿಯರ ಹಾರೈಕೆ, ದೇವರ ಆಶೀರ್ವಾದ ದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಆತ್ಮವಿಶ್ವಾಸದಿಂದ ಪ್ರಯತ್ನಿಸಿದರೆ ಖಂಡಿತವಾಗಿಯೂ ಗುರಿ ಮುಟ್ಟಬಹುದು. ಇಲ್ಲಿಯ ವಿದ್ಯಾರ್ಥಿಗಳ ಮಾತುಗಳು ನನ್ನ ಉತ್ಸಾಹವನ್ನು ಹೆಚ್ಚಿಸಿದೆ. ಇಂದು ನ್ಯಾಯಧೀಶೆಯಾಗಿ ಕಲಿತ ಶಾಲೆಗೆ ಬಂದು ಸನ್ಮಾನ ಸ್ವೀಕರಿಸಿರುವುದು ಖುಷಿ ತಂದಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶೆ ಶ್ರೀಮತಿ ಜ್ಯೋತ್ಸ್ನಾ ದೋಳ ಹೇಳಿದರು. ಅವರು ಮರ್ಕಂಜ ಪ್ರೌಢಶಾಲೆ ಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ದಲ್ಲಿ ಸನ್ಮಾನ‌ ಸ್ವೀಕರಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಿಸಿದ್ದ ಪುತ್ತೂರಿನ ಖ್ಯಾತ ನ್ಯಾಯವಾದಿ ಈಶ್ವರ ಭಟ್ ಬೆಟ್ಟರವರು ಮಾತನಾಡಿ ಅತ್ಯಂತ ಕಷ್ಟದ ಹುದ್ದೆ ಈ ಮರ್ಕಂಜ ದ ಜ್ಯೋತ್ಸ್ನಾ ರವರಿಗೆ ಲಭಿಸಿದೆ. ಅವರ ಪ್ರಾಮಾಣಿಕತೆ, ಸತತ ಪ್ರಯತ್ನ, ದೇವರ ಆಶೀರ್ವಾದ, ಹಿರಿಯ ಆಶೀರ್ವಾದದಿಂದ ಅವರ ಗೌರವಾನ್ವಿತ ಹುದ್ದೆಯನ್ನು ಅಲಂಕರಿಸುವ ಮಟ್ಟಕ್ಕೆ ತಲುಪಿದ್ದಾರೆ. ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರಲ್ಲದೇ ಅವರ ಹುದ್ದೆಯ ಕಾರ್ಯವೈಖರಿಯ ಬಗ್ಗೆಯೂ ಮಾತನಾಡಿದರು.
ಸನ್ಮಾನಗೊಂಡ ಮಹಾಬಲ ಕಟ್ಟಕ್ಕೋಡಿ ಮತ್ತು ಕೆಂಚವೀರಪ್ಪರವರ ಬಗ್ಗೆಯೂ ಮೆಚ್ಚಿಗೆಯ ಮಾತುಗಳನ್ನು ವೇದಿಕೆಯ ಅತಿಥಿಗಳು ಮಾತನಾಡಿದರು.
ಲಕ್ಷ್ಮೀಶ ರೈಯವರು ಮಾತನಾಡಿ ಎಲ್ಲಾ ವಿದ್ಯಾರ್ಥಿ ಗಳಿಗೂ ಅವರದ್ದೇ ಆದ ಪ್ರತಿಭೆಗಳಿರುತ್ತವೆ. ಅವುಗಳನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿ ಸಂದರ್ಭದಲ್ಲೇ ಅತ್ಯತ್ತಮ ಮ ವಾದಗಳನ್ನು ಮಂಡಿಸುತ್ತಿದ್ದಾಗ ನ್ಯಾಯವಾದಿಯಾನ್ನಾಗಿಸುವ ಬಗ್ಗೆ ತಿಳಿಸಿದ್ದೆ. ಆದರೆ ಜ್ಯೋತ್ಸ್ನಾ ರವರು ಕಠಿಣ ಪರಿಸ್ಥಿತಿ ಗಳನ್ನು ಮೀರಿ ನ್ಯಾಯಾಧೀಶೆಯಾಗಿ ಬೆಳೆದಿರುವುದು ನಮಗೆಲ್ಲ ಹೆಮ್ಮೆ ಎಂದರು. ಕಾರ್ಯಕ್ರಮ ಕ್ಕೆ ಶಿಕ್ಷಕ ವೃಂದವರು, ವಿದ್ಯಾರ್ಥಿಗಳು ಸಹಕರಿಸಿದರು.
ಸಭೆಯಲ್ಲಿ ಎಸ್.ಡಿ.ಎಂ.ಸಿಯ ಮಾಜಿ ಅಧ್ಯಕ್ಚರುಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.