Breaking News

ಶೆಟ್ಟಿಮಜಲು : ಭಾರೀ ಮಳೆಯಿಂದ ಬಿದಿರನ‌ ಪಾಲಕ್ಕೆ ಹಾನಿ-ಕೊಚ್ಚಿ ಹೋದ ಸೇವಾಜೆ ತಾತ್ಕಾಲಿಕ ರಸ್ತೆ

Advt_Headding_Middle

ಅ.4ರಂದು ಮಧ್ಯಾಹ್ನ ಸುರಿದ ಭಾರೀ ಮಳೆಗೆ ಸೇವಾಜೆ – ಮಡಪ್ಪಾಡಿ ರಸ್ತೆಯಿಂದ ಶೆಟ್ಟಿಹಲಮಜಲು ಕಾಲೋನಿಗೆ ಹೋಗುವಲ್ಲಿ ಇರುವ ಬಿದಿರಿನ ಪಾಲಕ್ಕೆ ಹಾನಿಯಾದ‌ ಘಟನೆ ಮತ್ತು‌ ಹೊಸತಾಗಿ ನಿರ್ಮಾಣಗೊಳ್ಳುತ್ತಿರುವ ಸೇವಾಜೆ ಸೇತುವೆಯ ಬಳಿ ಸ್ಥಳೀಯರು ಸೇರಿ ಶ್ರಮವಹಿಸಿ ಮಾಡಿದ ಬದಲಿ ರಸ್ತೆಯೂ ಕೊಚ್ಚಿ ಹೋದ ಘಟನೆ ವರದಿಯಾಗಿದೆ.

ಶೆಟ್ಟಿಮಜಲು ಎಂಬಲ್ಲಿ ಇರುವ ನದಿ ದಾಟಲು ಸ್ಥಳೀಯ ರು ಸೇರಿ ಪಾಲ ನಿರ್ಮಿಸಿದ್ದರು.ಅ.4ರಂದು ಸುರಿದ ಮಳೆಗೆ ಭಾರೀ ಪ್ರಮಾಣದಲ್ಲಿ ನೀರು ಬಂದು, ನೀರಿನಲ್ಲಿ ಬಂದ ಮರದ ದಿಮ್ಮಿಗಳು ಬಿದಿರಿನ ಪಾಲಕ್ಕೆ ಹೊಡೆದು ಹಾನಿ ಉಂಟಾಗಿದೆ. ಇಲ್ಲೊಂದು ಸೇತುವೆ ನಿರ್ಮಿಸಬೇಕೆಂದು ಊರವರ ಬೇಡಿಕೆಯಿದ್ದು, ನಿರ್ಮಿಸುವ ಕುರಿತು ಜನಪ್ರತಿನಿಧಿಗಳಿಂದ ಆಶ್ವಾಸನೆಗಳು ದೊರೆತಿತ್ತು. ಈ ಬಗ್ಗೆ ಸುದ್ದಿ ಮಾಧ್ಯಮಗಳು ವರದಿ ಮಾಡಿತ್ತು. ಆದರೆ ಇನ್ನು ಕೂಡಾ ಸೇತುವೆ ನಿರ್ಮಾಣ ವಾಗಲೇ ಇಲ್ಲ. ವಿದ್ಯಾರ್ಥಿ ಗಳು ಸೇರಿದಂತೆ ಸಾರ್ವಜನಿಕ ರು ಹಲವಾರು ವರ್ಷಗಳಿಂದ ಭಯದಿಂದಲೇ ಈ ಪಾಲ‌ ದಾಟುತ್ತಿದ್ದಾರೆ. ಇದೇ ಪಾಲದಿಂದ ಒಮ್ಮೆ ಬಿದ್ದು ಅದೃಷ್ಟವಶಾತ್ ದಡ ಸೇರಿದ ಘಟನೆಯೂ ನಡೆದಿತ್ತು.‌ ಆದಷ್ಟು ಬೇಗ ಈ ಪಾಲಕ್ಕೊಂದು ಮುಕ್ತಿ ಸಿಗಬೇಕಿದೆ.

 

ಸೇವಾಜೆಯಲ್ಲಿ ಹೊಸದಾಗಿ ಸೇತುವೆ ನಿರ್ಮಾಣ ವಾಗುವ ಕಾರಣ ರಸ್ತೆ ಸಂಚಾರ ನಿರ್ಭಂಧಿಸಲಾಗಿತ್ತು. ಇದರಿಂದ ಈ ಭಾಗದವರು ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯ ತೆ ಎದುರಾಗಿತ್ತು. ಹೀಗಾಗಿ ಮಳೆ ಕಡಿಮೆಯಾದ ಕಾರಣ ಊರಿನವರು ಸೇರಿಕೊಂಡು ಮೋರಿ ಅಳವಡಿಸಿ ಬದಲಿ ತಾತ್ಕಾಲಿಕ ರಸ್ತೆಯನ್ನು ಅ.3ರಂದು ನಿರ್ಮಿಸಿದ್ದರು. ಮರುದಿನ ಸುರಿದ ಭಾರೀ ಮಳೆಗೆ ಮೋರಿ ಸಮೇತ ರಸ್ತೆ ಕೊಚ್ಚಿ ಹೋಗಿದೆ. ಮಳೆ ಕಡಿಮೆಯಾದಂತೆ ಸೇತುವೆ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ ಎಂದಿದ್ದ ಕಾಮಗಾರಿ ನಡೆಸುವವರು ಇನ್ನೂ ಕಾಮಗಾರಿ ಆರಂಭಿಸಿಲ್ಲ. ಹೀಗಾಗಿ ಸೇತುವೆ ನಿರ್ಮಾಣ ಕೂಡಲೇ ಆರಂಭಿಸಬೇಕೆಂದು ಸ್ಥಳೀಯ ರು ಒತ್ತಾಯಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.