Breaking News

ಸಿಂದಗಿ, ಹಾನಗಲ್ ಮರು ಚುನಾವಣೆ ವಿಜಯ ನಮ್ಮದೆ : ವಿಜಯೇಂದ್ರ

Advt_Headding_Middle

 

ಸುಳ್ಯ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗ್ಗೆ ಸಚಿವ ಅಂಗಾರರಲ್ಲೂ ಚರ್ಚಿಸುವೆ

ಕರ್ನಾಟಕ ರಾಜ್ಯದ ಸಿಂದಗಿ ಮತ್ತು ಹಾನಗಲ್ ಕ್ಷೇತ್ರದ ಮರು ಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರವರು ಹೇಳಿದರು.
ಅವರು ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಈ ವಿಷಯ ತಿಳಿಸಿದರು. ಮರುಚುನಾವಣೆ ನಡೆಯಲಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ವಿಜಯಿಯಾಗಲಿದೆ ಎಂದರು.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ೧೧೦ ಕೆ.ವಿ ವಿದ್ಯುತ್ , ಮಲಯಾಲ ಐನೆಕಿದು ರಸ್ತೆ, ನೆಟ್ವರ್ಕ್ ಸಮಸ್ಯೆ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಸಚಿವ ಅಂಗಾರ ಅವರತ್ರ ಚರ್ಚಿಸುವುದಾಗಿ ನುಡಿದರು. ಪ್ರಶ್ನೆಯೊಂದಕ್ಕೆ ಮಾತನಾಡಿದ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕಾಗಿಲ್ಲ, ಕಾಂಗ್ರೆ ತಮ್ಮನ್ನು ತಾವೇ ಮುಗಿಸಿಕೊಳ್ಳಲಿದೆ ಎಂದರು. ಜೆಡಿಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ೧೨೩ ಕ್ಷೇತ್ರ ವಿಜಯಿಯಾಗುವ ಸಂಕಲ್ಪ ಮಾಡುತಿಲ್ಲ. ಕೇವಲ ೨೩ ಸ್ಥಾನ ಮಾತ್ರ ಗೆಲ್ಲಲು ಪ್ರಯತ್ನಿಸುತ್ತಿದೆ ಎಂದರು. ತಾನು ಬಿಜೆಪಿ ಸಾಮಾನ್ಯ ಸದಸ್ಯನಾಗಿದ್ದು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ತಾನು ಮಾಡಲಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.