ಕೆ. ವಿ. ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಪದಗ್ರಹಣ ಸಮಾರಂಭ

Advt_Headding_Middle

ಸುಳ್ಯದ ಕೆ. ವಿ. ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ 2021-22 ನೇ ಸಾಲಿನ ವಿದ್ಯಾರ್ಥಿ ಸಂಘದ ನಾಯಕರ ಚುನಾವಣೆಯು ಎಲೆಕ್ಟ್ರಾನಿಕ್ ಮತ ಯಂತ್ರದ ಮೂಲಕ ಮತ ಚಲಾಯಿಸಿ ವಿಜೇತರ ಪಟ್ಟಿಯನ್ನು ಘೋಷಿಸಲಾಗಿತ್ತು. ಇದರ ಪದಗ್ರಹಣ ಸಮಾರಂಭವು ಅ. 6ರಂದು ಶಾಲಾ ಸಭಾಂಗಣದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ವಿದ್ಯುಕ್ತವಾಗಿ ಆರಂಭಿಸಲಾಯಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೆ. ವಿ.ಜಿ . ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ .ಯಶೋಧ ರಾಮಚಂದ್ರ ಭಾಗವಹಿಸಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಗುರುತು ಫಲಕಗಳನ್ನು ನೀಡಿ, ಜೀವನದಲ್ಲಿ ನಾಯಕತ್ವದ ಅವಕಾಶ ಒದಗಿ ಬಂದಾಗ ಅಳವಡಿಸಿಕೊಳ್ಳಬೇಕಾದಂತಹ ಗುಣಗಳನ್ನು ಹಾಗೂ ಮಹತ್ವವನ್ನು ವಿವರಿಸಿ ನೂತನ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳ ತಂಡಕ್ಕೆ ಶುಭಹಾರೈಸಿದರು.

 


ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್ ಎಸ್. ವಹಿಸಿ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಇವರು ಶಾಲಾ ಮಂತ್ರಿ ಮಂಡಲದ ಪ್ರತಿನಿಧಿಗಳಿಗೆ ಶುಭ ಕೋರಿದರು.ವೇದಿಕೆಯಲ್ಲಿ ಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ಶಿಲ್ಪಾ ಬಿದ್ದಪ್ಪ ಉಪಸ್ಥಿತರಿದ್ದರು.೧೦ ನೇ ತರಗತಿ ವಿದ್ಯಾರ್ಥಿಗಳಾದ ಅದ್ವಿಕಾ ಕೆ. ಆರ್ ಹಾಗೂ ಶಿಶಿರ್ ಬಿ ಸೋಮಯಾಗಿ ಕಾರ್ಯಕ್ರಮ ನಿರೂಪಿಸಿ, ಸಿಂಚನ ಕೆ ಸ್ವಾಗತಿಸಿ ದೃತಿಕಾ ವಂದಿಸಿದರು.ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು. ಕೋವಿಡ್೧೯ನಿಯಮದ ಅಡಿಯಲ್ಲಿ ಕಾರ್ಯಕ್ರಮವು ನೆರವೇರಿತು.


ಚಿತ್ರದಲ್ಲಿ ಎಡದಿಂದ ಕುಳಿತವರು ನಾಯಕ ವಿದ್ಯಾರ್ಥಿ ನಾಯಕ ಪ್ರಥಮ್ ಶೇಖರ್ ಹಾಗೂ ವಿದ್ಯಾರ್ಥಿ ನಾಯಕಿ ಎಮ್. ಡಿ. ಸುದೀಪ್ತ,
ಎರಡನೆಯ ಸಾಲಿನಲ್ಲಿ ಎಡದಿಂದ ಪ್ರಧಾನ ಸಂಪಾದಕಿ ತನುಷಾ ಬಿ.ಎಸ್, ಕ್ರೀಡಾ ನಾಯಕಿ ಮಾನ್ಯ ಎ, ಸಾಂಸ್ಕೃತಿಕ ನಾಯಕ ಹಿತೇಶ್ ಎಮ್, ಆರೋಗ್ಯ ಮತ್ತು ಶುಚಿತ್ವ ನಾಯಕ ಜಾಝಿಲ್ ಟಿ ಎಮ್, ವಿದ್ಯಾರ್ಥಿ ಉಪ ನಾಯಕ ಯಶಸ್ ಡಿ.ಪಿ, ವಿದ್ಯಾರ್ಥಿ ಉಪ ನಾಯಕಿ ಪ್ರತಿಜ್ಞಾ ಬಿ.ಎಮ್, ಆರೋಗ್ಯ ಮತ್ತು ಶುಚಿತ್ವ ನಾಯಕಿ ವರ್ಷಿಣಿ ಎಮ್, ಸಾಂಸ್ಕೃತಿಕ ನಾಯಕಿ ಸಾನ್ವಿ ಬಿ.ಜಿ ಹಾಗೂ ಮಾದ್ಯಮ ವರದಿಗಾರ್ತಿ ಆನಂದವಲ್ಲಿ ಕೆ,
ಮೂರನೆಯ ಸಾಲಿನಲ್ಲಿ ಎಡದಿಂದ ಮಾದ್ಯಮ ವರದಿಗಾರ ಬಿಪಾಶ್ ಪಿ.ಡಿ, ಪ್ರಧಾನ ಸಂಪಾದಕ ವಿಶೇಷ್ ಟಿ ರಾವ್, ಕ್ರೀಡಾ ನಾಯಕ ಆದಿತ್ಯನ್ ಎಸ್, ನಾಯರ್, ಉಪ ಸಂಪಾದಕ ಸುಮಂತ್ ಕೆ, ಹಾಗೂ ಉಪ ಸಂಪಾದಕಿ ವಾಂಚಿತಾ ಎ.ಕೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.