Breaking News

ಅ. 7ರಿಂದ ಅ. 14: ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

Advt_Headding_Middle

 

ಬೆಳ್ಳಾರೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ನವರಾತ್ರಿ ಮಹೋತ್ಸವಗಳು ಅ. 7ರಿಂದ ಅ. 14ರ ತನಕ ನಡೆಯಲಿದೆ.
ಅ. 7ರಂದು ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಅಣ್ಣು ಭಟ್ ದೀಪೋಜ್ವಲನದ ಮೂಲಕ ನವರಾತ್ರಿ ಉತ್ಸವಗಳಿಗೆ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಣೈ, ಕಾರ್ತಿಕ್ ಮಣಿಕ್ಕಾರ, ಗೌರೀಶ್ ಶ್ಯಾನುಭಾಗ್ ಮಣಿಕ್ಕಾರ, ರಾಜೇಂದ್ರ ಆಚಾರ್, ಪ್ರೇಮಚಂದ್ರ, ಶ್ರೀಮತಿ ಹರಿಣಿ, ಆನಂದ ನಾಯಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರತೀ ದಿನ ಮಧ್ಯಾಹ್ನ 12.00 ಗಂಟೆಗೆ ಮತ್ತು ರಾತ್ರಿ 8.00 ಗಂಟೆಗೆ ಶ್ರೀ ಲಕ್ಷ್ಮೀ ವೆಂಕಟರಮಣ ಮತ್ತು ಶ್ರೀ ಅಮ್ಮನವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ನವರಾತ್ರಿಯ ಪ್ರತೀ ದಿನ ಮಧ್ಯಾಹ್ನ ಭೂರಿಭೋಜನ ನಡೆಯಲಿದೆ. ಸದ್ರಿ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು
ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.