ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Advt_Headding_Middle

 

ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ನವರಾತ್ರಿ ಉತ್ಸವಗಳು ಅ. 7ರಿಂದು ಆರಂಭಗೊಂಡು ಅ. 15ರ ತನಕ ಅರ್ಚಕರಾದ ರಾಜೇಶ್ ಅಮ್ಮಣ್ಣಾಯಯರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಗಳೊಂದಿಗೆ ಜರಗಲಿದೆ.
ಅ. 7ರಂದು ನವರಾತ್ರಿ ಪೂಜೆ ಆರಂಭಗೊಂಡಿತು. ಬೆಳಿಗ್ಗೆ ಗಣಪತಿ ಹೋಮ, ದೈವಗಳಿಗೆ ತಂಬಿಲ ನಡೆಯಿತು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೇನ್ಯಗುತ್ತು ಗಿರಿನಾಥ ಶೆಟ್ಟಿ, ಕೇನ್ಯ ರವೀಂದ್ರನಾಥ ಶೆಟ್ಟಿ ಸೇರಿದಂತೆ ಹಲವು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅ. 9ರಂದು ಶ್ರೀ ಮಹಾವಿಷ್ಣು ದೇವರಿಗೆ ಅಲಂಕಾರ ಪೂಜೆ ನಡೆಯಲಿದೆ. ಅ. 10ರಂದು ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗ ತಂಬಿಲ ನೆರವೇರಲಿದೆ. ಅ. 12ರಂದು ಕದಿರು ತುಂಬಿಸುವುದು ನಡೆಯಲಿದೆ. ಅ. 13 ರಂದು ಆಂಜನೇಯ ದೇವರಿಗೆ ಅಲಂಕಾರ ಪೂಜೆ, ಅ. 14ರಂದು ಆಯುಧ ಪೂಜೆ ಹಾಗೂ ಅ. 15ರಂದು ನವಾನ್ನ ಭೋಜನ, ಅಕ್ಷರಾಭ್ಯಾಸ, ರಾತ್ರಿ ರಂಗಪೂಜೆಯೊಂದಿಗೆ ನವರಾತ್ರಿ ಪೂಜೆ ಮುಕ್ತಾಯಗೊಳ್ಳಲಿದೆ. .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.