ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರಿಂದ ಕೂತ್ಕುಂಜ‌ ಬೂತ್ ಸಮಿತಿ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅನಾವರಣ

Advt_Headding_Middle

 

 

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ , ಬೆಳ್ಳಾರೆ ಮಹಾಶಕ್ತಿ ಶಕ್ತಿ ಕೇಂದ್ರ , ಪಂಜ ಶಕ್ತಿ ಕೇಂದ್ರದ ಕೂತ್ಕುಂಜ ಬೂತ್ ಸಮಿತಿ 1-125ರ ಅಧ್ಯಕ್ಷ ಧರ್ಮಪಾಲ ಕಕ್ಯಾನ ಇವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಅ‌7 ರಂದು ಜರುಗಿತು. ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನಾಮಫಲಕ ಅನಾವರಣ ಗೊಳಿಸಿ ಮಾತನಾಡಿದರು. ಪಕ್ಷದ ಹಿರಿಯ ಕಾರ್ಯಕರ್ತ ಡಾ.ರಾಮಯ್ಯ ಭಟ್ ದೀಪ ಪ್ರಜ್ವಲನೆ ಗೊಳಿಸಿದರು.

ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪ್ರಾಸ್ತಾವಿಕಗೈದರು.

ವೇದಿಕೆಯಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು, ಕೂತ್ಕುಂಜ ಬೂತ್ ಸಮಿತಿ 1-125ರ ಅಧ್ಯಕ್ಷ ಧರ್ಮಪಾಲ ಕಕ್ಯಾನ, ಐವತ್ತೊಕ್ಲು 3 ನೇ ವಾರ್ಡ್ ಬೂತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ದೇರಾಜೆ,ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸುಭೋಧ್ ಶೆಟ್ಟಿ ಮೇನಾಲ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು. ಜಯರಾಮ ಕಲ್ಲಾಜೆ ನಿರೂಪಿಸಿದರು. ವಸಂತ ನಡುಬೈಲು ವಂದಿಸಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕಂದಡ್ಕ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಶಿವರಾಮಯ್ಯ ಕರ್ಮಾಜೆ, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರುಳ್ಯ,
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ,ಪೂರ್ಣಿಮಾ ದೇರಾಜೆ, ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು,ಪಂಜ‌ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚನಿಯಪ್ಪ ಗೌಡ ಕುಳ್ಳಕೋಡಿ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ, ಐವತ್ತೊಕ್ಲು 1 ವಾರ್ಡ್ ಬೂತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಮೇಲ್ಪಾಡಿ, ಶ್ರೀಮತಿ ರತ್ನಾವತಿ ಕಕ್ಯಾನ ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯತ್ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.