ಕಸ ಎಸೆದವರನ್ನು ಪತ್ತೆ ಮಾಡಿ ದಂಡ ಹಾಕಿದ ಆಲೆಟ್ಟಿ ಗ್ರಾ. ಪಂ.

Advt_Headding_Middle

ಆಲೆಟ್ಟಿ ಗ್ರಾಮದ ಪರಿವಾರಕಾನ ಎಂಬಲ್ಲಿ ರಸ್ತೆ ಬದಿ ಕಸ ಎಸೆದವರನ್ನು ಪತ್ತೆ ಮಾಡಿದ ಆಲೆಟ್ಟಿ ಗ್ರಾ.ಪಂ.ನವರು ಎಸೆದವರಿಗೆ 2೦೦೦ ರೂ. ದಂಡ ವಿಧಿಸಿ ಅವರಿಂದಲೇ ಕಸ ತೆಗೆಸಿದ್ದಾರೆ. ಪರಿವಾರಕಾನ ಎಂಬಲ್ಲಿ ಎರಡು ವಾರದ ಹಿಂದೆ ರಸ್ತೆ ಬದಿಯಲ್ಲಿ ಕಾಂಕ್ರೀಟ್ ಗೋಣಿಚೀಲಗಳು, ಇನ್ನಿತರ ಕಸಗಳನ್ನು ರಸ್ತೆ ಬದಿಯಲ್ಲಿ ಹಾಕಲಾಗಿತ್ತು. ಇದನ್ನು ಸ್ಥಳಿಯರು ಗಮನಿಸಿ ಕಸದ ಫೊಟೋ ಹಾಗೂ ಕಸ ತಂದ ಟ್ರ್ಯಾಕ್ಟರ್‌ನ ಫೊಟೋ ತೆಗೆದಿದ್ದರು. ಬಳಿಕ ಸ್ಥಳಿಯರೊಬ್ಬರು ಆ ಫೊಟೋಗಳನ್ನು ಪಾಂಚಜನ್ಯ ಸುಳ್ಯ ವಾಟ್ಸಾಪ್ ಗ್ರೂಪ್‌ಗೆ ಹಾಕಿ ವಿವರವನ್ನು ಕೂಡಾ ಬರೆದಿದ್ದರು. ಪಾಂಚಜನ್ಯ ಗ್ರೂಪ್‌ನ ನಿರಂಜನ್‌ರವರು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕರಿಗೆ ಹಾಗೂ ಆಲೆಟ್ಟಿ ಗ್ರಾ.ಪಂ.ನ ಸದಸ್ಯ ಸುದೇಶ್ ಅರಂಬೂರುಗೆ ವಿಷಯ ತಿಳಿಸಿದರು. ಎಲ್ಲರೂ ಸೇರಿ ಕಸ ಹಾಕಿದವರನ್ನು ಪತ್ತೆಮಾಡಿದರು. ಇಂದು ಕಸ ಹಾಕಿರುವ ಜಗದೀಶ್ ಎಂಬವರು ಆಲೆಟ್ಟಿ ಗ್ರಾ.ಪಂ.ಗೆ ಹೋಗಿ ತಪ್ಪೊಪ್ಪಿಗೆ ಬರೆದುಕೊಟ್ಟರಲ್ಲದೆ ಆಲೆಟ್ಟಿ ಗ್ರಾ.ಪಂ. ಹಾಕಿದ ೨೦೦೦ ರೂ. ದಂಡವನ್ನು ಪಾವತಿಸಿದರೆಂದು ತಿಳಿದುಬಂದಿದೆ. ಹಾಗೂ ಆ ಕಸವನ್ನು ಹಾಕಿದವರೇ ವಾಪಾಸ್ ಕೊಂಡೊಯ್ದರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.