Breaking News

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಆರಂಭ, ರಾಜಾಂಗಣ ವಿದ್ಯುತ್ ದೀಪಗಳ ಲೋಕಾರ್ಪಣೆ

Advt_Headding_Middle

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವಗಳು ಅ. 7ರಂದು ಆರಂಭಗೊಂಡಿದ್ದು, ಅ. 15ರ ತನಕ ಶ್ರೀ ಕ್ಷೇತ್ರದ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರೀಯವರ ನೇತೃತ್ವದಲ್ಲಿ ನಡೆಯಲಿದೆ.

ಅ. 7ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಪ್ರಣಾಮ್ ರೈ ಅರ್ಗುಡಿಯವರು ರಾಜಾಂಗಣ ಚಪ್ಪರಕ್ಕೆ ಕೊಡುಗೆಯಾಗಿ ಅಳವಡಿಸಿದ ವಿದ್ಯುತ್ ದೀಪಗಳ ಲೋಕಾರ್ಪಣೆ ನಡೆಯಿತು. ದೇವಸ್ಥಾನದ ಸಂಘಟನಾ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಅರ್ಗುಡಿ ದೀಪಗಳನ್ನು ಉದ್ಘಾಟಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ ಕಾಂಜಿ ಸೇರಿದಂತೆ ಊರ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾತಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಅ. 9ರಂದು ಗಣಪತಿ ಹೋಮ, ಕದಿರು ತುಂಬಿಸುವುದು, ನವಾನ್ನ, ರಾತ್ರಿ ಸಾಮೂಹಿಕ ದುರ್ಗಾಪೂಜೆ ನಡೆಯಲಿದೆ. ಅ. 10ರಂದು ಸಾಮೂಹಿಕ ಚಂಡಿಕಾಹೋಮ ಜರಗಲಿದೆ.

ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಅ. 7ರಂದು ಮಹಾಗಣಪತಿ ಹೋಮ, ನಾಂದಿ ನಡೆಯಲಿದೆ. ಅ. 15ರಂದು ವಿಜಯದಶಮಿ ಪ್ರಯುಕ್ತ ಮಧ್ಯಾಹ್ನ 11.00 ಗಂಟೆಗೆ ಅಕ್ಷರಾಭ್ಯಾಸ, ರಾತ್ರಿ 8.30ಕ್ಕೆ ಸಾಮೂಹಿಕ ರಂಗಪೂಜೆ, ದೈವಗಳಿಗೆ ತಂಬಿಲ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.