Breaking News

ಸುದ್ದಿ ಭಜನಾ ಸ್ಪರ್ಧೆ ಫಲಿತಾಂಶ ಪ್ರಕಟ

Advt_Headding_Middle

ಪ್ರಥಮ : ಶ್ರೀ ರಾಮ ಭಜನಾ ಮಂಡಳಿ ಕಲ್ಮಡ್ಕ

ದ್ವಿತೀಯ : ರಂಗಮಯೂರಿ ಕಲಾ ಶಾಲೆ ಸುಳ್ಯ

ಸುದ್ದಿ ಮಾಧ್ಯಮದ ವತಿಯಿಂದ ಸುದ್ದಿ ಚಾನೆಲ್ ಸ್ಟುಡಿಯೋದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಭಜನಾ ಸ್ಪರ್ಧೆ 2021 ರ ಫಲಿತಾಂಶ ಪ್ರಕಟಗೊಂಡಿದೆ. ತೀರ್ಪುಗಾರರ ನಿರ್ಣಯದಂತೆ ಸ್ನರ್ಧೆಯಲ್ಲಿ ಶ್ರೀ ರಾಮ ಭಜನಾ ಮಂಡಳಿ ಕಲ್ಮಡ್ಕ ಪ್ರಥಮ, ದ್ವಿತೀಯ ರಂಗಮಯೂರಿ ಕಲಾ ಶಾಲೆ ಸುಳ್ಯ , ತೃತೀಯ ಶ್ರೀ ಸದಾಶಿವ ಭಜನಾ ಸಂಘ ಆಲೆಟ್ಟಿ ತಂಡವು ಆಯ್ಕೆಗೊಂಡಿದೆ.
ಸುದ್ದಿ ಚಾನೆಲ್ ಸ್ಟುಡಿಯೋ ದಲ್ಲಿ ನಡೆದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಸುಮಾರು 11 ತಂಡಗಳು ಭಾಗವಹಿಸಿದ್ದವು. ಪ್ರತೀ ತಂಡದಲ್ಲಿ 7 ಮಂದಿ ಸದಸ್ಯರಿದ್ದು 25 ನಿಮಿಷಗಳ ಸಮಯಾವಕಾಶ ನೀಡಲಾಗಿತ್ತು. ಎಲ್ಲಾ ಭಜನಾ ತಂಡಗಳ ಭಜನೆಯನ್ನು ಸಂಪೂರ್ಣ ಚಿತ್ರೀಕರಿಸಲಾಗಿತ್ತು. ಸ್ಪರ್ಧೆಯ ನಿರ್ಣಾಯಕರಾಗಿ ಪುತ್ತೂರಿನ ಪುನೀತ್ ಆರ್ಕೆಸ್ಟ್ರಾದ ನಿರ್ದೇಶಕರು ಹಾಗೂ ಹಿನ್ನಲೆ ಗಾಯಕರಾದ ಚಂದ್ರಶೇಖರ ಹೆಗ್ಡೆ ಮತ್ತು ಶ್ರೀರಾಜ್ ಮ್ಯೂಸಿಕಲ್ಸ್ ನ ನಿರ್ದೇಶಕರು ಹಾಗೂ ಹಿನ್ನಲೆ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ ರವರು ಸಹಕರಿಸಿದರು. ಪ್ರಥಮ ಪ್ರಶಸ್ತಿ ಪಡೆದ ತಂಡಕ್ಕೆ ರೂ 5000/- ಮತ್ತು ಸ್ಭರಣಿಕೆ, ದ್ವಿತೀಯ ಬಹುಮಾನ ರೂ.3000/- ಮತ್ತು ಸ್ಮರಣಿಕೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡದ ಸದಸ್ಯರಿಗೆ ಸುದ್ದಿ ಸಮೂಹ ಸಂಸ್ಥೆಯ ಪರವಾಗಿ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಭಜನೆಯನ್ನು ಸುದ್ದಿ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.