Breaking News

ಸುಳ್ಯದ ಕೆ.ಆರ್. ಕಾಂಪ್ಲೆಕ್ಸ್ ನಲ್ಲಿ ಹಾಸನಡ್ಕ ಆರೋಗ್ಯ ಧಾಮ ಶುಭಾರಂಭ

Advt_Headding_Middle

 

ಡಾ. ಶಶಿಧರ್ ಹಾಸನಡ್ಕ ಮತ್ತು ಡಾ. ಅನುಪಮಾ ಶಶಿಧರ್ ರವರ ಹಾಸನಡ್ಕ ಆರೋಗ್ಯ ಧಾಮ (ವೆಲ್ ನೆಸ್ ಸೆಂಟರ್) ಅ. 8 ರಂದು ಶುಭಾರಂಭಗೊಂಡಿತು. ಸಚಿವ ಎಸ್. ಅಂಗಾರ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ಆನೆಕಾರ ಡೆಂಟಲ್ ಕ್ಲಿನಿಕ್ ನ ಡಾ. ಜಯಪ್ರಸಾದ ಆನೆಕಾರ, ಶ್ರೀಹರ್ಷ ಶಾಸ್ತ್ರಿ ಮಣಿಲ, ಶ್ರೀಧರ ಭಟ್ ಉರಿಮಜಲು, ರವಿಪ್ರಕಾಶ್ ಅಟ್ಲೂರ್, ಮಾಜಿ ತಾ.ಪಂ. ಸದಸ್ಯೆ ಶ್ರೀಮತಿ ಜಾಹ್ನವಿ ಕಾಂಚೋಡು, ಗೋವಿಂದಯ್ಯ ಕಾಂಚೋಡು, ಶಶಿಕಿರಣ ಆನೆಕಾರ, ಅಖಿಲ ಶಶಿಕಿರಣ ಆನೆಕಾರ, ಶಿವರಾಮಯ್ಯ ಕರ್ಮಜೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಾಸನಡ್ಕ ವೆಲ್ ನೆಸ್ ಸೆಂಟರ್ ನಲ್ಲಿ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಬೆನ್ನು ನೋವು, ಬೊಜ್ಜು ಇತ್ಯಾದಿಗಳಿಗೆ ವೈಯಕ್ತಿಕ ಯೋಗ ತರಬೇತಿ, ಆಕ್ಯುಪಂಕ್ಚರ್ (ಸೂಜಿ ಚಿಕಿತ್ಸೆ) ಮತ್ತು ಆಕ್ಯುಪ್ರೆಶರ್ ಮೂಲಕ ಸೈಯಾಟಿಕ, ಡಿಸ್ಕ್ ಸಮಸ್ಯೆ, ಕತ್ತು ನೋವು, ಬೆನ್ನುನೋವು, ಸೊಂಟ ನೋವು, ಆರ್ಥೈಟಿಸ್, ಮೈಗ್ರೇನ್ ಇತ್ಯಾದಿಗಳಿಗೆ ಪರಿಣಾಮಕಾರಿ ಚಿಕಿತ್ಸೆ, ಕೌನ್ಸಿಲಿಂಗ್ ಮೂಲಕ ಕೌಟುಂಬಿಕ, ವೈಯಕ್ತಿಕ ಸಮಸ್ಯೆ, ಖಿನ್ನತೆ, ಉದ್ವೇಗ ಇತ್ಯಾದಿಗಳಿಗೆ ಆಪ್ತಸಲಹೆ ನೀಡಲಾಗುವುದು. (ಕೌನ್ಸಲಿಂಗ್),
ಡಯಟ್ ಮತ್ತು ನ್ಯೂಟ್ರಿಶನ್: ದೇಹದ ತೂಕ ಇಳಿಸಲು, ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳಿಗೆ ಸಮತೋಲಿತ ಹಾಗೂ ನಿಖರವಾದ ಆಹಾರ ಮಾರ್ಗದರ್ಶನ ನೀಡಲಾಗುವುದು.
ಇವರ ಮಾತೃ ಸಂಸ್ಥೆ ಅಮರಪಡ್ನೂರು ಗ್ರಾಮದ ಶೇಣಿ ಬಳಿ ಇರುವ
ಹಾಸನಡ್ಕ ಆರೋಗ್ಯಧಾಮದಲ್ಲಿ ಒಳರೋಗಿ ಚಿಕಿತ್ಸೆಗೆ ವ್ಯವಸ್ಥೆ ಇದೆ ಎಂದು ಡಾ. ಶಶಿಧರ್ ಹಾಸನಡ್ಕ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.