ಸುಳ್ಯದ ಶ್ರೀರಾಂಪೇಟೆಯಲ್ಲಿ “ಪ್ರಿಂಟಿನ ಅಂಗಡಿ” ಶುಭಾರಂಭ

Advt_Headding_Middle

 

ಸುಳ್ಯಕ್ಕೆ ಹೊಸತನದ ಪರಿಚಯ

ಗೆರೆಯಿಲ್ಲದ , ಚಿತ್ತಿಲ್ಲದ , ರಾಸಾಯನಿಕ ದುರ್ಗಂಧ ರಹಿತ ಅತ್ಯಾಧುನಿಕ ತಂತ್ರಜ್ಞಾನದ ಪ್ರಿಂಟಿಂಗ್

ಸುಳ್ಯದ ಶ್ರೀರಾಂಪೇಟೆಯಲ್ಲಿರುವ ಇಬ್ರಾಹಿಂ ಕಾಂಪ್ಲೆಕ್ಸ್ ನಲ್ಲಿ ಹರ್ಷ ಕುಮಾರ್ ಕೆ.ಕೆ ಬೊಳಿಯಮಜಲು ರವರ ಮಾಲಕತ್ವದ ” ಪ್ರಿಂಟಿನ ಅಂಗಡಿ” ಯು ಅ. 8 ರಂದು ಶುಭಾರಂಭಗೊಂಡಿತು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರವರು ರಿಬ್ಬನ್ ಕತ್ತರಿಸಿ ಶೋರೂಂ ನ್ನು ಉದ್ಘಾಟಿಸಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಯವರು ಪ್ರಿಂಟಿಂಗ್ ಮೆಷಿನ್ ಗೆ ಚಾಲನೆ ನೀಡಿದರು. ಹರ್ಷ ರವರ ತಾಯಿ ಶ್ರೀಮತಿ ಪ್ರಮೋದ ,
ಹಿರಿಯ ಉದ್ಯಮಿ ಸುಳ್ಯ ಸದರ್ನ್ ರೆಸಿಡೆನ್ಸಿ ಮಾಲಕ ವಿಶ್ವನಾಥ ರಾವ್, ಪ್ರಗತಿಪರ ಕೃಷಿಕ ಪದ್ಮನಾಭ ನಾಯರ್ ರವರು ದೀಪ ಬೆಳಗಿಸಿದರು.

ಈ ಸಂದರ್ಭ ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಚಂದ್ರಶೇಖರ ದಾಮ್ಲೆ, ಮಯೂರಿಸ್ ರೆಸ್ಟೋರೆಂಟ್ ಮಾಲಕ ವಿಜಯ್ ಮಯೂರಿ, ಕಾಂಪ್ಲೆಕ್ಸ್ ಮಾಲಕ ಅಬ್ದುಲ್ ಗಫಾರ್, ವಿಶ್ವನಾಥ ನಾಯರ್, ಭಾಸ್ಕರ ನಾಯರ್, ಭಾರತ್ ಮೆಡಿಕಲ್ಸ್ ನ ಪ್ರಭಾಕರ್ ಮಯೂರಿ, ದೀಕ್ಷಾ ಟ್ರೇಡರ್ಸ್ ನ ಮಾಧವ ರಾವ್ ,ಸಿಟಿ ಮೆಡಿಕಲ್ಸ್ ನ ಅಬ್ದುಲ್ ಮಜೀದ್, ಕಾಳಿಕಾಂಬಾ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕ ದಿನೇಶ್ ಆಚಾರ್ಯ, ಜೆ.ಎಂ.ಜೆ.ಇಲೆಕ್ಟ್ರಿಕಲ್ಸ್ ನ ರೋಶನ್, ಜ್ಯೋತಿ ಸೌಂಡ್ಸ್ ನ ಶಿವಪ್ರಸಾದ್, ಜ್ಯೋತಿ ಡೆಕೋರೇಷನ್ ನ ಸತ್ಯಪ್ರಸಾದ್ ಕೊಡಿಯಾಲಬೈಲು, ರಾಧಾಕೃಷ್ಣ ವಾಗ್ಲೆ, ದೇವಮೂಲೆ ಕಮಲಾಕ್ಷ ನಾಯಕ್, ಶ್ರೀಮತಿ ರಾಧಾ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು. ಹರ್ಷ ರವರ ಪತ್ನಿ ಶ್ರೀಮತಿ ಪವಿತ್ರ, ಸಹೋದರ ಶಶಿವರ್ಧನ, ಅತ್ತೆ ಅಂಬಾ ಭವಾನಿ, ಡಿಸೈನಿಂಗ್ ಟೀಮ್ ನ ಕೃತಿ ಪನೇಡ್ಕ , ಸ್ಟೆಪಿಲ್ಲಾ ಡಿಸೋಜ ಹಾಗು ನವೀನ ಸೂಡ್ತಿಲರವರು ಸಹಕರಿಸಿದರು. ಪ್ರಾಚಾರ್ಯ, ಖ್ಯಾತ ಗಾಯಕ ಕೆ.ಆರ್. ಗೋಪಾಲಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು.
ಬೆಳೆಯುತ್ತಿರುವ ಸುಳ್ಯ ನಗರಕ್ಕೆ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಸ್ವಚ್ಛ ನಗರದ ಕಲ್ಪನೆಗೆ ಪೂರಕವಾಗಿರುವ ಪ್ರಿಂಟಿಂಗ್ ಮೆಷಿನ್ ಇದಾಗಿದ್ದು ರಾಜ್ಯದ ರಾಜಧಾನಿ ಬೆಂಗಳೂರು ಹೊರತು ಪಡಿಸಿ ಸುಳ್ಯಕ್ಕೆ ಎರಡನೆಯದಾಗಿರುತ್ತದೆ. ಸಿಂಗಾಪುರದಿಂದ ತರಿಸಿರುವ ಈ ಅತ್ಯಾಧುನಿಕ ಮೆಷಿನ್ ನಲ್ಲಿ ರಾಸಾಯನಿಕ ದುರ್ಗಂಧ ರಹಿತ ಹಾಗೂ ಗೆರೆಯಿಲ್ಲದೆ, ಚಿತ್ತಿಲ್ಲದೆ ಮಾಸದ ಇಂಕ್ ಬಳಸಿ, ಕೈಗೆಟುಕುವ ದರದಲ್ಲಿ ಕ್ವಾಲಿಟಿ ಪ್ರಿಂಟಿನ ಮೂಲಕ ಸುಳ್ಯಕ್ಕೆ ಪರಿಚಯಿಸಲಾಗುತ್ತಿದೆ. ಅಲ್ಲದೆ ಇಲ್ಲಿ
ಎಲ್ಲಾ ತರದ ಬ್ಯಾನರ್, ಫ್ಲೆಕ್ಸ್ ಪ್ರಿಂಟಿಂಗ್ , ಪೋಸ್ಟರ್, ಬ್ರಾಂಡಿಂಗ್, ಲಾರ್ಜ್ ಫಾರ್ಮೆಟ್ ಕ್ವಾಲಿಟಿ ಪ್ರಿಂಟಿಂಗ್, ಗ್ರಾಫಿಕ್ ಡಿಸೈನ್, ವೆಬ್ ಸೈಟ್ ಡಿಸೈನ್, ಸ್ಟಿಕ್ಕರ್ ಮತ್ತು ಲೇಬಲ್, ವೆಹಿಕಲ್ ಗ್ರಾಫಿಕ್ಸ್, ಕಸ್ಟಮೈಸ್ಡ್ ಗಿಫ್ಟ್ ಐಟಂ ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.